ಉಡುಪಿ, ಎ.24 (Daijiworld News/MB) : ರಾಷ್ಟ್ರೀಯ ಪಂಚಾಯತಿ ರಾಜ್ ದಿನಾಚರಣೆ ಪ್ರಯುಕ್ತವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಂಚಾಯತ್ ಅಧ್ಯಕ್ಷರುಗಳೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿನ ಪುರಸಭೆ ಮಾಜಿ ಅಧ್ಯಕ್ಷ ಸೋಮಶೇಖರ್ ಭಟ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ.
ಈ ಕುರಿತಾಗಿ ತಿಳಿಸಿದ ಸೋಮಶೇಖರ್ ಭಟ್ ಅವರು, ತಾನು ಜೈಪುರದಲ್ಲಿ ಪುರಸಭೆ ಸದಸ್ಯರ ಅಧಿವೇಶನದಲ್ಲಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲು ಸೇರಿದ್ದರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸೋಮಶೇಖರ್ ಭಟ್ರಿಗೆ ಕರೆ ಮಾಡಿ ಸುಮಾರು ಎರಡು ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ವರದಿ ತಿಳಿಸಿದೆ.
ದಕ್ಷಿಣ ಭಾರತದಲ್ಲಿ ಜನ ಸಂಘ 1968ರಲ್ಲಿ ಉಡುಪಿ ಪುರಸಭೆಯಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಸಂದರ್ಭದಲ್ಲಿ ತಾನೂ ಪುರಸಭೆ ಆಗಿದ್ದೆ. ವಿ ಎಸ್ ಆಚಾರ್ಯ ಅವರು ಆಗ ಉಡುಪಿ ಪುರಸಭೆ ಅಧ್ಯಕ್ಷರಾಗಿದ್ದರು ಎಂದು ಸೋಮಶೇಖರ್ ಭಟ್ ತಿಳಿಸಿದ್ದಾರೆ.