ಮಂಗಳೂರು, ಏ 24(Daijiworld News/MSP): ರಾಜ್ಯ ಸರ್ಕಾರ ಘೋಷಣೆ ಮಾಡಿದ ಮೀನುಗಾರರ ಸಾಲಮನ್ನಾ ಯೋಜನೆಯಡಿ 23 ಸಾವಿರ ಜನ ಫಲಾನುಭವಿಗಳಿಗೆ 60 ಕೋಟಿ ರೂಪಾಯಿಯನ್ನು ರಾಜ್ಯ ಹಣಕಾಸು ಇಲಾಖೆ ಅಧಿಕೃತವಾಗಿ ಇಂದು ಬಿಡುಗಡೆ ಮಾಡಿದೆ ಎಂದು ರಾಜ್ಯ ಮೀನುಗಾರಿಕೆಗೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಾಲಮನ್ನಾದ ಹಣ ಭೂಮಿ ಕೋಶದ ಮೂಲಕ ಸಾಲಗಾರರ ಖಾತೆಗೆ ಜಮಾ ಮಾಡಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಮ್ಮ ಹೇಳಿಕೆಯಲ್ಲಿ ತಿಳಿಸಿದರು.
ಈ ಕೊರೊನಾದ ಸಂಕಷ್ಟದ ದಿನಗಳಲ್ಲೂ ಕೂಡ ಮೀನುಗಾರರ ಹಿತರಕ್ಷಣೆಗಾಗಿ 60 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿಸಿದ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಹಾಗೂ ಸಹಕಾರ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್ ಅವರಿಗೆ ರಾಜ್ಯದ ಸಮಸ್ತ ಮೀನುಗಾರರ ಪರವಾಗಿ ರಾಜ್ಯ ಮೀನುಗಾರಿಕೆಗೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಧನ್ಯವಾದಗಳನ್ನು ತಿಳಿಸಿದ್ದಾರೆ.