ಮಂಗಳೂರು, ಮಾ 08: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಬಾಸ್ಕರ್ ಮೊಯ್ಲಿ ಹಾಗೂ ಉಪಮೇಯರ್ ಆಗಿ ಕಾಂಗ್ರೆಸ್ನ ಮುಹಮ್ಮದ್ ಕುಂಜತ್ತಬೈಲ್ ಆಯ್ಕೆಯಾದರು. ಗುರುವಾರ ನಗರದ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ, ಪ್ರಾದೇಶಿಕ ಆಯುಕ್ತೆ ಶಿವಯೋಗಿ ಸಿ. ಕಳಸದ ಈ ಆಯ್ಕೆಯನ್ನು ಪ್ರಕಟಿಸಿದರು.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಿಂದ ಬಾಸ್ಕರ್ ಮೊಯ್ಲಿ ಹಾಗೂ ಬಿಜೆಪಿಯಿಂದ ಸುರೇಂದ್ರ ನಾಮಪತ್ರ ಸಲ್ಲಿಸಿದ್ದರು. ಬಾಸ್ಕರ್ ಅವರಿಗೆ 37 ಹಾಗೂ ಸುರೇಂದ್ರ ಅವರಿಗೆ 19 ಮತಗಳು ಲಭಿಸಿದವು. ಹಾಗೂ 5 ಮತಗಳು ತಟಸ್ಥವಾಗಿ ಉಳಿಯಿತು
ಇನ್ನು ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ, ಮುಹಮ್ಮದ್ ಕುಂಜತ್ತಬೈಲ್ ಹಾಗೂ ಬಿಜೆಪಿ ಮೀರಾ ಕರ್ಕೇರಾ ಅವರಿಗೆ ಸರದಿಯಂತೆ 37 ಹಾಗೂ 19 ಮತಗಳು ಲಭಿಸಿತು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2 ಹಾಗೂ ಸಿಪಿಎಂ, ಎಸ್ಡಿಪಿಐ ಹಾಗೂ ಪಕ್ಷೇತರ ತಲಾ 1 ಸ್ಥಾನಗಳನ್ನು ಹೊಂದಿವೆ