ಮಂಗಳೂರು, ಏ 24 (DaijiworldNews/SM): ಗುರುವಾರದಂದು ಆತಂಕದ ಸುದ್ದಿ ನೀಡಿದ್ದ ದ.ಕ. ಜಿಲ್ಲೆಯ ಜನತೆಗೆ ಶುಕ್ರವಾರದಂದು ನಿಟ್ಟುಸಿರು ಬಿಡುವ ವರದಿ ಲಭ್ಯವಾಗಿದೆ. ಶುಕ್ರವಾರ ಲಭ್ಯವಾದ 117 ಮಂದಿಯ ವರದಿಯ ಪೈಕಿ ಎಲ್ಲಾ ವರದಿಯೂ ಕೂಡ ನೆಗೆಟಿವ್ ಆಗಿದೆ. ಆ ಮೂಲಕ ಜಿಲ್ಲೆಯ ಜನತೆಗೆ ಗುರುವಾರ ಎದುರಾಗಿದ್ದ ಶಾಕ್ ನಿಂದ ಹೊರ ಬರುವಂತಾಗಿದೆ.
ಇನ್ನು ಶುಕ್ರವಾರದಂದು 41 ಮಂದಿಯನ್ನು ನಿಗಾ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇಲ್ಲಿಯ ತನಕ 1253 ಮಂದಿಯನ್ನು ಫಿವರ್ ಕ್ಲೀನಿಕ್ ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಮಾರು 463 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. ಶುಕ್ರವಾರದಂದು 204 ಮಂದಿಯ ಸ್ಯಾಂಪಲನ್ನು ಪರೀಕ್ಷೆಗೆ ರವಾನಿಸಲಾಗಿದೆ.
ಇನ್ನು ಇಲ್ಲಿಯ ತನಕ 1819 ಮಂದಿಯ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಈ ಪೈಕಿ 1356 ಮಂದಿಯ ಸ್ಯಾಂಪಲ್ ಲಭ್ಯವಾಗಿದೆ. ಇನ್ನು 6073 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಪೂರೈಸಿದ್ದಾರೆ. ಇನ್ನು ಇ ಎಸ್ ಐ ಆಸ್ಪತ್ರೆಯಲ್ಲಿ 10 ಮಂದಿ ನಿಗಾದಲ್ಲಿದ್ದಾರೆ. 50 ಮಂದಿ ಎನ್ ಐ ಟಿಕೆಯಲ್ಲಿ ನಿಗಾದಲ್ಲಿದ್ದಾರೆ. 31 ಮಂದಿಯನ್ನು ಇಂದು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ.