ವಿಟ್ಲ, ಏ 24 (DaijiworldNews/SM): ಕೊರೊನಾದಿಂದ ಮೃತಪಟ್ಟ ಬಂಟ್ವಾಳದ ನಿವಾಸಿ ಮಹಿಳೆಗೆ ಚಿಕಿತ್ಸೆ ನೀಡಿದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವಿಟ್ಲ ನಿವಾಸಿ ನರ್ಸ್ ಒಬ್ಬರನ್ನು ಹಾಸ್ಪಿಟಲ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ವಿಟ್ಲದ ನಿವಾಸಿ ನರ್ಸ್ ವೊಬ್ಬರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದರು. ಮೃತಪಟ್ಟ ಬಂಟ್ವಾಳದ ವೃದ್ಧೆಗೆ ಈ ಆಸ್ಪತ್ರೆಯಲ್ಲಿ 38 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ನರ್ಸ್ ಈ ಸಂದರ್ಭ ಇಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ನರ್ಸ್ ಗೆ ಕೂಡ ಹೋಂ ಕ್ವಾರಂಟೈನ್ ವೊದಗಿಸಲಾಗಿದೆ. ಇನ್ನು ಇದೀಗ ಆಸ್ಪತ್ರೆ ಸುತ್ತಲೂ ಸೀಲ್ ಡೌನ್ ಮಾಡಲಾಗಿದೆ.