ಬೆಂಗಳೂರು, ಮಾ 08 : ಲೋಕಾಯುಕ್ತರಿಗೆ ಚಾಕು ಇರಿತ ಪ್ರಕರಣದ ಆರೋಪಿಯಾಗಿರುವ ತೇಜರಾಜ್ ಶರ್ಮ ಪೊಲೀಸ್ ವಿಚಾರಣೆ ವೇಳೆ ಚಿತ್ರ-ವಿಚಿತ್ರ ಹೇಳಿಕೆಯನ್ನು ನೀಡುತ್ತಿದ್ದಾನೆ. ಇರಿತದ ಹಿಂದೆ ಭಗವದ್ಗೀತೆಯ ಉಪದೇಶವಿದ್ದು ಅದರಂತೆಯೇ ನಡೆದುಕೊಂಡಿದ್ದಾನೆ ಎಂದು ವಿಚಿತ್ರ ಹೇಳಿಕೆಯನ್ನು ನೀಡುತ್ತಿದ್ದಾನೆ. ತನಗೆ ದೇವರಲ್ಲಿ ಅಪಾರ ಭಕ್ತಿ ಇದೆ, ವಿಶಾಖ ನಕ್ಷತ್ರದಲ್ಲಿ ಜನಿಸಿದ ಮಹಾಭಾರತದ ಅರ್ಜುನ ಕೃಷ್ಣನ ಉಪದೇಶದಂತೆ ಅಧರ್ಮದ ವಿರುದ್ದ ಯುದ್ದ ಸಾರಿ ವಿಜಯಿಯಾಗಿದ್ದ. ನಾನು ವಿಶಾಖ ನಕ್ಷತ್ರದಲ್ಲಿ ಜನಿಸಿದವನು. ಈ ನಕ್ಷತ್ರದಲ್ಲಿ ಜನಿಸಿದವರು, ಅಧರ್ಮದ ವಿರುದ್ದ ಹೊರಡುವವರು. ನನಗೂ ಅಧರ್ಮದ ವಿರುದ್ದ ಗೆಲುವು ಸಾಧಿಸಬೇಕಾಗಿತ್ತು. ಹೀಗಾಗಿಯೇ ನಾನು ಒಂದು ತಿಂಗಳ ತಿಂದೆಯೇ ಚಾಕು ಖರೀದಿಸಿದ್ದೆ. ಅಧರ್ಮದ ವಿರುದ್ದ ಯುದ್ದ ಸಾರಲು ಬುಧವಾರ ಶುಭ ದಿನವಾದ ಕಾರಣ ಆ ದಿನಕ್ಕಾಗಿ ಕಾದಿದ್ದೆ. ಕೊನೆಗೂ ನಾನು ಅಂದುಕೊಂಡದನ್ನು ಸಾಧಿಸಿ ಯುದ್ದವನ್ನು ಗೆದ್ದಿದ್ದೇನೆ ಎಂದು ಪೊಲೀಸ್ ವಿಚಾರಣೆ ವೇಳೆ ಆರೋಪಿ ಹೇಳುತ್ತಿದ್ದಾನೆ ಎಂದು ಮಾಧ್ಯಮ ವರದಿ ತಿಳಿಸಿದೆ. ಇನ್ನು ಆರೋಪಿ ಇದೆಲ್ಲವನ್ನು ಯೂಟ್ಯೂಬ್ ನಲ್ಲಿ ಜ್ಯೋತಿಷಿಗಳು ಹೇಳುವುದನ್ನು ನೋಡಿ ಅಧ್ಯಯನ ಮಾಡಿಕೊಂಡಿದ್ದಾನಂತೆ.