ಮಂಗಳೂರು, ಎ.25 (Daijiworld News/MB) : ಬಿಸಿಲಿನ ತಾಪದಿಂದ ಬಸವಳಿದಿದ್ದ ಕರಾವಳಿಯಲ್ಲಿ ಮಳೆರಾಯನ ಆಗಮನದಿಂದಾಗಿ ಇಳೆ ತಂಪಾಗಿದೆ.
ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆಯವರೆಗೂ ಮಂಗಳೂರಿನ ವಿವಿದೆಡೆ ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದು ವಾತಾವರಣ ಕೊಂಚ ತಂಪಾಗಿದೆ.
ಈ ಮೊದಲೇ ಹವಾಮಾನ ಇಲಾಖೆ ಮಳೆ ಬರುವ ಮುನ್ಸೂಚನೆ ನೀಡಿದ್ದು ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೆ ಮಂಗಳೂರು, ಉಳ್ಳಾಲ, ತೊಕ್ಕೊಟ್ಟು, ಬೊಂದೇಲ್, ಪಂಡಿತ್ಹೌಸ್, ನಂತೂರು, ದೇರಳಕಟ್ಟೆ, ಬೋಳಾರ ಸಹಿತ ಹಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಭಾನುವಾರದವರೆಗೆ ದಕ್ಷಿಣ ಕನ್ನಡ ಒಳನಾಡು ಮತ್ತು ಕರಾವಳಿಯ ಕೆಲವೆಡೆ ಗುಡುಗು ಅಹಿತ ಮಳೆಯಾಗಲಿದ್ದು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ.