ಮಂಗಳೂರು, ಎ.26 (Daijiworld News/MB) : ಸುಮಾರು ವರ್ಷಗಳಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಪಂಪ್ವೆಲ್ ಮೇಲ್ಸೇತುವೆಯಲ್ಲಿ ಶನಿವಾರ ಮುಂಜಾನೆ ಮಳೆ ಸುರಿದ ಬಳಿಕ ಬಿರುಕು ಕಾಣಿಸಿಕೊಂಡಿದೆ.
ಲಾಕ್ಡೌನ್ ಕಾರಣದಿಂದಾಗಿ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ಇಳಿಕೆಯಾಗಿದ್ದು ಲಾಕ್ಡೌನ್ ತೆರವಿನ ಬಳಿಕ ಬಿರುಕುಗೊಂಡ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ಅಪಾಯಕ್ಕೆ ಕಾರಣವಾಗಬಹುದು. ಅವೈಜ್ಞಾನಿಕವಾದ ಕಾಮಗಾರಿಯೇ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.
ಏತನಧ್ಯೆ ಶನಿವಾರ ಮಳೆ ಸುರಿದ ಬಳಿಕ ಮೇಲ್ಸೇತುವೆಯ ಇಕ್ಕಡೆಗಳ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ನಿಂತು ಕೆಸರು ತುಂಬಿಕೊಂಡಿದ್ದು ಕೂಡಲೇ ಕೆಸರನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.