ಮಂಗಳೂರು, ಎ.26 (Daijiworld News/MB) : ಕೊರೊನಾ ಲಾಕ್ಡೌನ್ ಮುಗಿದ ಬಳಿಕ ಮಂಗಳೂರಿನ ಜನತೆ 11 ಅಂಶಗಳನ್ನು ಪಾಲಿಸೋಣ ಎಂದು ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ನಮ್ಮ ಕುಡ್ಲಾವನ್ನು ಉತ್ತಮ ಹಾಗೂ ಪ್ರಯೋಜನಕಾರಿ ಸಂಗತಿಗಳನ್ನು ಬೆಳೆಸಬೇಕಾಗಿದೆ. ನಾವೆಲ್ಲರೂ ಈ ಅಂಶಗಳನ್ನು ಪಾಲಿಸಬೇಕು. ನಮ್ಮ ಮಂಗಳೂರನ್ನು ಆದರ್ಶ ಹಾಗೂ ಸ್ಪೂರ್ತಿದಾಯಕ ನಗರವನ್ನಾಗಿ ಮಾರ್ಪಾಡು ಮಾಡೋಣ ಎಂದು ತಿಳಿಸಿದ್ದಾರೆ.
ಹಾಗೆಯೇ ಸುಮಾರು 11 ಅಂಶಗಳನ್ನು ಕೊರೊನಾ ಲಾಕ್ಡೌನ್ ಅಂತ್ಯವಾದ ಬಳಿಕ ಪಾಲಿಸೋಣ ಎಂದು ಹೇಳಿದ್ದಾರೆ.
1.ನಾವು ಪರಿಸರವನ್ನು ಗೌರವಿಸೋಣ.
2.ನಾವು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸೋಣ.
3.ಎಲ್ಲರನ್ನು ಹಾಗೂ ಎಲ್ಲರ ಅವರ ಅಭಿಪ್ರಾಯಗಳನ್ನು ಗೌರವಿಸೋಣ .
4.ನಮಗೆ ಯಾವಾಗ ಸಾಧ್ಯವೋ ಆಗ ಜನರಿಗೆ ಸಹಾಯ ಮಾಡೋಣ.
5.ಕೇವಲ ಒಂದು ಬಾರಿ ಮಾತ್ರ ಬಳಸಲಾಗುವ ಪ್ಲಾಸ್ಟಿಕ್ನ್ನು ನಾವು ಬಳಸುವುದು ಬೇಡ.
6.ನಮ್ಮ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ ನೀಡೋಣ.
7.ಎಲ್ಲಾ ಸಂಚಾರಿ ನಿಯಮವನ್ನು ಪಾಲಿಸೋಣ.
8.ಅನಗತ್ಯವಾಗಿ ಶಬ್ದ ಮಾಲಿನ್ಯ ಮಾಡದೇ ನಮ್ಮ ಕುಡ್ಲಾವನ್ನು ಶಬ್ದ ಮಾಲಿನ್ಯದಿಂದ ಮುಕ್ತ ಮಾಡೋಣ.
9.ನಾವು ವಿದ್ಯುತ್ನ್ನು ಉಳಿಸೋಣ.
10.ಮಂಗಳೂರನ್ನು ವಾಯು ಮಾಲಿನ್ಯದಿಂದ ಮುಕ್ತವಾಗಿಸಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸೋಣ.
11.ತುಳು ಲಿಪಿಯ ಮೇಲೆ ಹೆಚ್ಚು ಒಲವು ತೋರಿ ನಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ನಮ್ಮ ಆಹಾರ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡೋಣ.
ನಾವು ನಮ್ಮ ಪರಿಸರಕ್ಕೆ ಹಾನಿಯಾಗುವಂತಹ ಕೆಲಸ ಮಾಡಿರುವುದರ ಕುರಿತಾಗಿ ಚಿಂತಿಸುವ ಸಮಯವಿದು. ನಾವೀಗ ನಮ್ಮ ನಗರವನ್ನು ಉತ್ತಮಗೊಳಿಸುವ ಬಗ್ಗೆ ಚಿಂತನೆ ನಡೆಸೋಣ. ನಮ್ಮ ಕುಡ್ಲಾವನ್ನು ಜೀವಿಸಲು ಸ್ವಸ್ಥವಾದ ಆದರ್ಶ ನಗರವನ್ನಾಗಿಸೋಣ ಎಂದು ಮನವಿ ಮಾಡಿದ್ದಾರೆ.