ಕಾಸರಗೋಡು, ಎ.26 (Daijiworld News/MB) : ಭಾನುವಾರವೂ ಕೂಡಾ ಕಾಸರಗೋಡು ಜಿಲ್ಲೆಯಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿಲ್ಲ. ಹಾಗೆಯೇ ಓರ್ವ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈವರೆಗೆ 175 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಈ ಪೈಕಿ 160 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಒಟ್ಟಾರೆ ಶೇ. 91. 4 ರಷ್ಟು ಸೋಂಕಿತರು ಗುಣಮುಖರಾದ್ದಂತಾಗಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ 15 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು ನಿಗಾದಲ್ಲಿರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಐಸೋಲೇಷನ್ ವಾರ್ಡ್ಗಳಲ್ಲಿ 32 ಮಂದಿ ಮಾತ್ರ ಇದ್ದಾರೆ. ಮನೆಗಳಲ್ಲಿ 2165 ಮಂದಿ ನಿಗಾದಲ್ಲಿದ್ದಾರೆ.
ಇನ್ನು 370 ಮಂದಿಯ ಕೊರೊನಾ ಪರೀಕ್ಷೆಯ ವರದಿ ಬರಬೇಕಾಗಿದ್ದು ಎರಡು ದಿನಗಳಿಂದ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳಿಲ್ಲ.