ಕಾಸರಗೋಡು, ಏ 27 (Daijiworld News/MSP): ಕ್ಷುಲ್ಲಕ ಕಾರಣಕ್ಕಾಗಿ ಗುಂಡು ಹಾರಿಸಿ ವ್ಯಕ್ತಿಯೋರ್ವನನ್ನು ಕೊಲೆಗೈದ ಘಟನೆ ಏ.26 ರ ಭಾನುವಾರ ಸಂಜೆ ಪಿಲಿಕ್ಕೋಡ್ ನಲ್ಲಿ ನಡೆದಿದೆ. ಕೊಲೆಗೀಡಾದವರನ್ನು ಪಿಲಿಕ್ಕೋಡಿನ ಕೆ. ಸಿ ಸುರೇಂದ್ರನ್ ( 54) ಎಂದು ಗುರುತಿಸಲಾಗಿದೆ. ಆರೋಪಿ ಸನಲ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಕೆ. ಸಿ ಸುರೇಂದ್ರನ್
ಭಾನುವಾರ ಸಂಜೆ ದಾರುಣ ಕೃತ್ಯ ನಡೆದಿದೆ. ಸುರೇಂದ್ರನ್ ಹಾಗೂ ಸನಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸನಲ್ ಸುರೇಂದ್ರನ್ ಮೇಲೆ ಗುಂಡು ಹಾರಿಸಿದ್ದು , ಗುಂಡು ಕುತ್ತಿಗೆಗೆ ತಾಗಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದ ಸುರೇಂದ್ರನ್ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಚಂದೇರ ಪೊಲೀಸ್ ಠಾಣೆ ಗೆ ತಲುಪಿ ಶರಣಾಗಿದ್ದಾನೆ. ಸನಲ್ ಮತ್ತು ಸುರೇಂದ್ರನ್ ನಡುವೆ ಆಸ್ತಿ ವಿವಾದಕ್ಕೆ ಉಂಟಾಗಿತ್ತು . ಎನ್ನಲಾಗಿದೆ. ಭಾನುವಾರ ಸಂಜೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾತಿನ ಚಕಮಕಿ ನಡೆದಿದ್ದು , ಈ ಸಂದರ್ಭದಲ್ಲಿ ಕೃತ್ಯ ನಡೆದಿದೆ.