ಮಂಗಳೂರು,ಏ 27 (Daijiworld News/MSP): ಸೀಲ್ ಡೌನ್ ಗೆ ಒಳಗಾಗಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ತಾಯಿ ಹಾಗೂ ಆಕೆಯ ಆರೈಕೆ ಮಾಡಿದ ಮಗನಲ್ಲೂ ಕೊರೊನಾ ಸೋಂಕು ದೃಢವಾಗಿದೆ. ಕುಲಶೇಖರದ ನಿವಾಸಿಯಾಗಿರುವ 80 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪುತ್ರನಲ್ಲಿ ಸೋಂಕು ದೃಢವಾಗಿದ್ದು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೊನಾ ದೃಢವಾದ ಬಂಟ್ವಾಳದ ಮೃತ ಮಹಿಳೆಯ ಚಿಕಿತ್ಸೆ ಪಡೆಯುತ್ತಿದ್ದ ಪಕ್ಕದ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದ ನರಿಕೊಂಬು ಗ್ರಾಮದ ನಾಯಿಲ ನಿವಾಸಿಯಲ್ಲಿ ಭಾನುವಾರವಷ್ಟೇ ಕೊರೊನಾ ದೃಢವಾದ ಹಿನ್ನಲೆಯಲ್ಲಿ ನಾಯಿಲ ಪ್ರದೇಶ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಕುಲಶೇಖರ ಸೀಲ್ ಡೌನ್ ಮಾಡಲಾಗಿದ್ದು ಸುತ್ತಮುತ್ತದ 7 ಕಿ.ಮಿ ವ್ಯಾಪ್ತಿಯೂ ಈ ಹಿನ್ನಲೆಯಲ್ಲಿ ಬಫರ್ ಝೋನ್ ಗೆ ಬರಲಿದೆ.