ಕಾಸರಗೋಡು, ಏ 27 (Daijiworld News/MSP): ಕಳೆದ ಮೂರು ದಿನಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ಹೊಸ ಕೊರೋನ ಪ್ರಕರಣ ದ್ರಢಪಟ್ಟಿಲ್ಲ. ಕೇರಳದಲ್ಲಿ ಹದಿಮೂರು ಪ್ರಕರಣಗಳು ದೃಢಪಟ್ಟಿದ್ದು ಆದರೆ ಕಾಸರಗೋಡಿನಲ್ಲಿ ಶನಿವಾರದಿಂದ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ.
ಜಿಲ್ಲೆಯಲ್ಲಿ 15 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ . ಒಟ್ಟು 175 ಪ್ರಕರಣಗಳು ದೃಢಪಟ್ಟಿತ್ತು. ಜಿಲ್ಲೆಯಲ್ಲಿ 2023 ಮಂದಿ ನಿಗಾದಲ್ಲಿದ್ದಾರೆ. 1986 ಮಂದಿ ಮನೆಯಲ್ಲಿ ಹಾಗೂ 37 ಮಂದಿ ಆಸ್ಪತ್ರೆ ಯಲ್ಲಿ ನಿಗಾದಲ್ಲಿದ್ದಾರೆ . ಇದುವರೆಗೆ ಜಿಲ್ಲೆಯಲ್ಲಿ ೪೧೧೨ ಸ್ಯಾಂಪಲ್ ಗಳನ್ನು ಕಳುಹಿಸಲಾಗಿದ್ದು , ಈ ಪೈಕಿ 3104 ಫಲಿತಾಂಶ ನೆಗಟಿವ್ ಆಗಿದೆ. 691 ಸ್ಯಾಂಪಲ್ ವರದಿ ಲಭಿಸಬೇಕಿದೆ. ಸೋಮವಾರ ಎಂಟು ಮಂದಿಯನ್ನು ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ.