ಮಂಗಳೂರು, ಏ 27 (DaijiworldNews/SM): ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಬಂಟ್ವಾಳದ ಮಹಿಳೆಯೊಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳದಲ್ಲಿ ಮೃತಪಟ್ಟ ಮಹಿಳೆಯರ ಪಕ್ಕದ ಮನೆಯ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಏಪ್ರಿಲ್ 27ರ ಸೋಮವಾರದಂದು ಸೋಂಕು ದೃಢಪಟ್ಟಿದ್ದವರ ಪೈಕಿ 80 ವರ್ಷ ಪ್ರಾಯದ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಅಧಿಕ ರಕ್ತದೊತ್ತಡ ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ.
ಇನ್ನುಳಿದಂತೆ, ರೋಗಿ ಸಂಖ್ಯೆ-326, 387, 489, 501, 506 ಯವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಐವರು ರೋಗಿಗಳ ಆರೋಗ್ಯ ಸ್ಥಿತಿ ಯಾವುದೇ ಗಂಭೀರವಾಗಿಲ್ಲ. ಐವರ ಸ್ಥಿತಿಯೂ ಕೂಡ ಸ್ಥಿರವಾಗಿದೆ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.