ಕಾಸರಗೋಡು, ಏ 28 (DaijiworldNews/SM): ಜಿಲ್ಲೆಯಲ್ಲಿ ಮಂಗಳವಾರದಂದು ಒಂದು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಮೂರು ದಿನಗಳ ಬಳಿಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ದಾಖಲಾದಂತಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 176ಕ್ಕೆ ತಲಪಿದೆ.
ಇನ್ನು ಮಂಗಳವಾರದಂದು ಕಾಸರಗೋಡಿನಲ್ಲಿ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಇಲ್ಲಿಯ ತನಕ 162 ಮಂದಿ ಗುಣಮುಖರಾದಂತಾಗಿದೆ.
ಇನ್ನು ಕಳೆದ ಮೂರು ದಿನಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ದೃಢಪಟ್ಟಿರಲಿಲ್ಲ. ಆ ಮೂಲಕ ಜನರು ನಿರಾತಂಕದಲ್ಲಿದ್ದರು. ಇನ್ನು ಈ ದಿನ ಕಾಸರಗೋಡು ಕೊರೊನಾ ಮುಕ್ತದತ್ತ ಮುಖಮಾಡಿತ್ತು. ಆದರೆ, ಇದೀಗ ಮಂಗಳವಾರದಂದು ಜಿಲ್ಲೆಯಲ್ಲಿ ಒಂದು ಪಾಸಿಟಿವ್ ಪ್ರಕರಣ ದಾಖಲಾಗುವ ಮೂಲಕ ಅಲ್ಪ ಆತಂಕಕ್ಕೆ ಕಾರಣವಾಗಿದೆ.