ಮಂಗಳೂರು, ಏ 28 (DaijiworldNews/SM): ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಆ ಮೂಲಕ ಜಿಲ್ಲೆಯ ಜನತೆಯಲ್ಲಿ ಇದ್ದಂತಹ ಆತಂಕ ದೂರವಾದಂತಾಗಿದೆ.
ಸೋಮವಾರದಂದು ಎರಡು ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಆತಂಕ ಎದುರಾಗಿತ್ತು. ಅದರ ಮುಂದುವರೆದ ಭಾಗವಾಗಿ ಮಂಗಳವಾರವೂ ಪಾಸಿಟಿವ್ ಪ್ರಕರಣಗಳಿವೆ ಎನ್ನುವ ಬಗ್ಗೆ ಗಾಸಿಪ್ ಹರಡುತ್ತಿತ್ತು. ಆದರೆ, ಆ ಎಲ್ಲಾ ಗಾಳಿ ಸುದ್ದಿಗಳಿಗೆ ಇದೀಗ ತೆರೆ ಬಿದ್ದುದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರದಂದು ಯಾವುದೇ ಪ್ರಕರಣಗಳು ಪಾಸಿಟಿವ್ ಆಗಿಲ್ಲ. ಎಲ್ಲಾ ವರದಿಗಳು ನೆಗೆಟಿವ್ ಆಗುವ ಮೂಲಕ ಜನರಲ್ಲಿ ಎದುರಾಗಿದ್ದ ಆತಂಕ ದೂರವಾಗಿದೆ.
ಮಂಗಳವಾರ ಲಭ್ಯವಾದ ವರದಿಯ ಮುಖ್ಯಾಂಶಗಳು:
101 ಮಂದಿಯ ವರದಿ ಇಂದು ಲಭ್ಯ
ಎಲ್ಲಾ 101 ಮಂದಿಯ ವರದಿ ನೆಗೆಟಿವ್
ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲ
297 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ರವಾನೆ
536 ಮಂದಿಯ ಪರೀಕ್ಷಾ ವರದಿ ನಿರೀಕ್ಷೆಯಲ್ಲಿ
9 ಮಂದಿ ನಿಗಾ ಹಿನ್ನೆಲೆ ಆಸ್ಪತ್ರೆಗೆ ದಾಖಲು
1751 ಮಂದಿಗೆ ಫಿವರ್ ಕ್ಲೀನಿಕ್ ನಲ್ಲಿ ಪರೀಕ್ಷೆ
46 ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿರುವುದು