ಕಾಸರಗೋಡು, ಏ 28 (DaijiworldNews/SM): ವಿಷಸೇವಿಸಿ 16 ವರ್ಷದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ಸಮೀಪದ ಅಡ್ಕಸ್ಥಳದಲ್ಲಿ ನಡೆದಿದೆ. ಅಡ್ಕಸ್ಥಳ ಮೊಗರುವಿನ ಸುಭಾಷ್ ರವರ ಪುತ್ರ ಅಭಿಲಾಷ್(16) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ.
ಮನೆಯವರ ಜೊತೆ ಸಮೀಪದ ತೋಟಕ್ಕೆ ತೆರಳಿದ್ದ ಅಭಿಲಾಷ್ ಸ್ವಲ್ಪ ಸಮಯ ಕಳೆದು ನೇರವಾಗಿ ಮನೆಗೆ ಮರಳಿದ್ದನು. ಬಳಿಕ ಒಂದಿಷ್ಟು ಸಮಯದ ಬಳಿಕ ಮನೆಯವರು ತೋಟದಿಂದ ಮರಳಿ ಬಂದಾಗ ಅಭಿಲಾಷ್ ಅಸ್ವಸ್ಥನಾಗಿ ಕಂಡು ಬಂದಿದ್ದು ಕೂಡಲೇ ಚೆಂಗಳದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ ಅಡ್ಯನಡ್ಕ ಹಯರ್ ಸೆಕಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದ. ಅಭಿಲಾಷ್ ಬಾಲ ಪ್ರತಿಭೆಯಾಗಿದ್ದು, ಸಾಹಿತ್ಯ ವಲಯದಲ್ಲಿ ಗಮನಸೆಳೆದಿದ್ದ. ಅಲ್ಲದೆ, ಫೊಟೋ, ವೀಡಿಯೋಗ್ರಾಫಿಯನ್ನು ಹವ್ಯಾಸವನ್ನಾಗಿಸಿ ರೂಢಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಇದೀಗ ಆತ್ಮಹತ್ಯೆಯ ಕುರಿತಂತೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.