ಮಂಗಳೂರು, ಎ.29 (Daijiworld News/MB) : ಶಕ್ತಿನಗರದ ಕಕ್ಕೆಬೆಟ್ಟು ಪ್ರದೇಶದ ನಿವಾಸಿಗಳಿಬ್ಬರಲ್ಲಿ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಕಕ್ಕೆಬಟ್ಟು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಈ ಪ್ರದೇಶದಲ್ಲಿ ಟ್ಯಾಂಕರ್ಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಲಾಯಿತು.
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪುತ್ರನಲ್ಲಿ ಸೋಮವಾರ ಸೋಂಕು ದೃಢವಾಗಿದ್ದು ಇಬ್ಬರು ಸೋಂಕಿತರು ವಾಸವಾಗಿರುವ ಶಕ್ತಿನಗರದ ಕಕ್ಕೆ ಬೆಟ್ಟು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಹಾಗೆಯೇ ಮನೆಯಿಂದ ಯಾರೂ ಕೂಡಾ ಹೊರ ಬರದಂತೆ ಎಚ್ಚರಿಕೆ ನೀಡಲಾಗಿದೆ.
ಹಾಗೆಯೇ ಕಕ್ಕೆಬೆಟ್ಟುವಿನ ಸುತ್ತಮುತ್ತಲಿನ 5 ಕೀ.ಮೀ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ.
ಈ ಇಬ್ಬರು ಸೋಂಕಿತರು ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.