ಕಾಸರಗೋಡು, ಎ.29 (DaijiworldNews/PY) : ಖಾಸಗಿ ಚಾನಲ್ವೊಂದರ ವರದಿಗಾರ ಸೇರಿದಂತೆ ಕಾಸರಗೋಡಿನಲ್ಲಿಇಬ್ಬರಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ 178ಕ್ಕೇರಿದೆ.
ಬುಧವಾರ ಕೊರೊನಾ ದೃಢಪಟ್ಟ ಇಬ್ಬರಿಗೂ ಕೊರೊನಾ ಸೋಂಕಿತರ ಸಂಪರ್ಕದಿಂದ ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಬುಧವಾರ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ.
ಕೇರಳದಲ್ಲಿ ಬುಧವಾರ ಹತ್ತು ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1930 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 29 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. 695 ಮಂದಿಯ ಸ್ಯಾಂಪಲ್ ಪರೀಕ್ಷಾ ವರದಿ ಇನ್ನೂ ಲಭಿಸಬೇಕಿದೆ.
ಸೋಂಕು ಪತ್ತೆಯಾದ ಪತ್ರಕರ್ತನ ಸಂಪರ್ಕದಲ್ಲಿದ್ದವರು ನಿಗಾದಲ್ಲಿರುವಂತೆ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದು, ಶೀಘ್ರವೇ ಇವರ ತಪಾಸಣೆ ನಡೆಸಿ ಸ್ಯಾಂಪಲ್ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.