ಮಂಗಳೂರು, ಏ 29 (DaijiworldNews/SM): ದ.ಕ. ಜಿಲ್ಲೆಯಲ್ಲಿ ಬುಧವಾರವೂ ಜನ ನಿಟ್ಟುಸಿರು ಬಿಡುವ ವರದಿ ಲಭ್ಯವಾಗಿದೆ. ಬುಧವಾರದಂದು 390 ಮಂದಿಯ ವರದಿ ಲಭ್ಯವಾಗಿದ್ದು, ಎಲ್ಲಾ ವರದಿಗಳು ನೆಗೆಟಿವ್ ಆಗಿದೆ.
ಮಂಗಳವಾರವೂ ಜಿಲ್ಲೆಯಲ್ಲಿ ಕೊರೊನಾ ನೆಗೆಟಿವ್ ವರದಿಗಳು ಲಭ್ಯವಾಗುವ ಮೂಲಕ ಜನತೆ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ, ಇಂದು ಆ ವರದಿ ಮುಂದುವರೆದಿದೆ. ಆ ಮೂಲಕ ಜಿಲ್ಲೆಯ ಜನತೆ ನಿರಾಳರಾಗಿದ್ದಾರೆ. ಇನ್ನು ಬುಧವಾರದಂದು 248 ಮಂದಿಯ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. 12 ಮಂದಿ ನಿಗಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 1859 ಮಂದಿಯನ್ನು ಫಿವರ್ ಕ್ಲೀನಿಕ್ ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.