ಮಂಗಳೂರು, ಏ 30 (Daijiworld News/MSP): ನಗರದ 58 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಇವರು ನಿವಾಸವಿರುವ ಬೋಳೂರು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು ಸುತ್ತಮುತ್ತ ಪ್ರದೇಶದ ಜನರು ಯಾರೂ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ.
ಸೋಂಕಿತರ ವಾಸವಾಗಿದ್ದ ಸುತ್ತಮುತ್ತ ನಿಯಂತ್ರಿತ ವಲಯವಾಗಿ (ಸೀಲ್ ಡೌನ್ ) ಘೋಷಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು 135ಕ್ಕೂ ಅಧಿಕ ಮನೆಗಳಿದ್ದು 640 ಮಂದಿ ಜನ ವಾಸವಿದ್ದಾರೆ. ಇವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ12 ಅಂಗಡಿ ಮುಂಗಟ್ಟುಗಳಿವೆ.
ಪೂರ್ವಕ್ಕೆ ಜೇಮ್ಸ್ ಡಿ ಸೋಜಾ ನಿವಾಸ, ಪಶ್ಚಿಮಕ್ಕೆ ಹಿಂದೂ ರುದ್ರ ಭೂಮಿ ಬೋಳೂರು, ಉತ್ತರಕ್ಕೆ ಬಿ.ಜೆ ಹೋಟೇಲ್ ಶ್ರೀ ವಿನಾಯ ಹೋಟೇಲ್ ಸುಲ್ತಾನ್ ಬತ್ತೇರಿ ಹಾಗೂ ದಕ್ಷಿಣಕ್ಕೆ ಹಿಂದೂ ರುದ್ರ ಭೂಮಿ, ಬೋಳೂರು ಎಂಟ್ರೆನ್ಸ್ ರಸ್ತೆ ಸುಲ್ತಾನ್ ಬತ್ತೇರಿ ಈ ವ್ಯಾಪ್ತಿ ಪ್ರದೇಶವೂ ಸೀಲ್ ಡೌಲ್ ಗೆ ಒಳಪಡುತ್ತದೆ
ಬೋಳೂರಿನ ಸುತ್ತಮುತ್ತಲಿನ 5 ಕೀ.ಮೀ ನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 16350 ಮನೆ, 1275ಅಂಗಡಿ ಮುಂಗಟ್ಟು, 79,800 ಜನಸಂಖ್ಯೆ ಈ ವ್ಯಾಪ್ತಿಗೆ ಒಳಪಟ್ಟಿದ್ದಾರೆ.
ಬಫರ್ ಝೋನ್ ವ್ಯಾಪ್ತಿಗೆ ಪೂರ್ವಕ್ಕೆ ಬೊಂದೇಲ್, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಉತ್ತರಕ್ಕೆ ಎಮ್ ಸಿ ಎಫ್ ರಾಷ್ಟ್ರೀಯ ಹೆದ್ದಾರಿ, ದಕ್ಷಿಣಕ್ಕೆ ನೇತ್ರಾವತಿ ನದಿ ಬೋಳಾರ್ ತನಕ ಒಳಪಡುತ್ತದೆ.