ಕಾಸರಗೋಡು, ಏ 30 (Daijiworld News/MSP): ಕೇರಳದಲ್ಲಿ ಅತೀ ಹೆಚ್ಚು ಕೊರೋನಾ ಸೋಂಕಿತರಿದ್ದ ಕಾಸರಗೋಡಿನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದರೂ ಕೆಲ ದಿನಗಳ ಬಳಿಕ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಕೊರೋನ ದಿಂದ ಮುಕ್ತಗೊಳ್ಳುವ ನಿರೀಕ್ಷೆಯಲ್ಲಿದ್ದ ಜಿಲ್ಲೆಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿರುವುದು ಚಿಂತೆಗೀಡು ಮಾಡಿದೆ. ಹೊಸ ಸೋಂಕು ತಗಳಿದವರ ಸೋಂಕಿನ ಮೂಲ ಪತ್ತೆ ಹಚ್ಚಲು ಸಾಧ್ಯವಾಗದೆ ಇರುವುದು ಜಿಲ್ಲಾಡಳಿತ , ಆರೋಗ್ಯ ಇಲಾಖೆ ಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಕಳೆದ ಎರಡು ದಿನಗಳಿಂದ ಸೋಂಕು ಪತ್ತೆಯಾದ ಮೂವರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗಲಿದೆ . ಈ ಪೈಕಿ ಓರ್ವ ಪತ್ರಕರ್ತ ಸೇರಿದ್ದಾನೆ . ಆದರೆ ಇವರಿಗೆ ಸೋಂಕು ತಗಲಿದವರ ಹಾಗೂ ವಿದೇಶದಿಂದ ಬಂದವರ ನೇರ ಸಂಪರ್ಕ ಇಲ್ಲ. ಇದರಿಂದ ಎಲ್ಲಿಂದ ಈ ಮೂವರಿಗೆ ಸೋಂಕು ತಗುಲಿದೆ ಎಂಬ ಪ್ರಶ್ನೆ ಉಂಟು ಮಾಡಿದೆ . ಪತ್ರಕರ್ತ ಅಲ್ಲದೆ ಅಜನೂರು ಮತ್ತು ಚೆಮ್ನಾಡಿನ ವ್ಯಕ್ತಿಗಳಿಗೆ ಎರಡು ದಿನಗಳ ಅವಧಿಯಲ್ಲಿ ಬಂದ ವೈದ್ಯಕೀಯ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು . ಆದರೆ ಸೋಂಕಿತರ ಸಂಪರ್ಕ ಇಲ್ಲದೆ ಇವರಿಗೆ ಎಲ್ಲಿಂದ ಸೋಂಕು ತಗಲಿತ್ತು ಎಂಬ ಬಗ್ಗೆ ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಲು ತೀರ್ಮಾನಿಸಿದೆ.
ಸೋಂಕು ಪತ್ತೆಯಾದ ಪ್ರದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ನಡೆಸಿದೆ. ಇವರ ಸಂಪರ್ಕದಲ್ಲಿದ್ದವರನ್ನು ತಪಾಸಣೆ ನಡೆಸಲು ತೀರ್ಮಾನಿಸಿದೆ. ಜಿಲ್ಲೆಯಲ್ಲಿ ಇದುವರೆಗೆ ೧೭೮ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು , ಈ ಪೈಕಿ ೧೬೫ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆದರೆ ಸೋಂಕು ಪತ್ತೆಯಾದವರಲ್ಲಿ ಬಹುತೇಕ ಮಂದಿ ವಿದೇಶದಿಂದ ಊರಿಗೆ ಬಂದವರು ಹಾಗೂ ಹತ್ತಿರದಿಂದ ಸಂಪರ್ಕದಲ್ಲಿದ್ದ ಆಯಾ ಮನೆಯ ವರು. ಆದರೆ ಇದು ಯಾವುದು ಇಲ್ಲದವರು ಸೋಂಕಿತರ ಸಂಪರ್ಕ ಇಲ್ಲದೆ ಸೋಂಕು ದೃಢಪಟ್ಟಿರುವುದು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಗಂಭೀರವಾಗಿ ಚಿಂತಿಸುವಂತೆ ಮಾಡಿದೆ . ಇದರ ಜೊತೆಗೆ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆಯೇ ಎಂಬ ಬಗ್ಗೆಯೂ ಆತಂಕ ಉಂಟು ಮಾಡುತ್ತಿದೆ