ಬೆಳ್ಮಣ್, ಏ 30 (Daijiworld News/MSP): ತಂದೆಯ ಅಂತ್ಯಸಂಸ್ಕಾರಕ್ಕೆ ಬಂದ ಇಬ್ಬರು ಮಕ್ಕಳ ಸಹಿತ ಒಂದೇ ಕುಟುಂಬದ ಐದು ಮಂದಿಯನ್ನು ಹೋಮ್ ಕ್ವಾರೆಂಟೈನ್ ಮಾಡಲಾದ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ನಡೆದಿದೆ.
ದೇಶದೆಲ್ಲೆಡೆ ಲಾಕ್ ಡೌನ್ ಇರುವ ಸಂದರ್ಭ ತಂದೆಯ ಅಂತಿಮ ಅಂತ್ಯ ಸಂಸ್ಕಾರಕ್ಕೆ ಮುಂಬಯಿ ಹಾಗೂ ಬೆಂಗಳೂರಿನಲ್ಲಿದ್ದ ಇಬ್ಬರು ಮಕ್ಕಳು ಹಾಗೂ ಆತನ ಕುಟುಂಬ ಸದಸ್ಯರು ನಂದಳಿಕೆಗೆ ಬಂದಿದ್ದು ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹೋಮ್ ಕ್ವಾರೆಂಟೈನ್ ಮಾಡಿದ್ದಾರೆ.
ಲಾಕ್ ಡೌನ್ಗೆ ಮೊದಲು ಶಿವಮೊಗ್ಗಕ್ಕೆ ಕೆಲಸಕ್ಕೆ ಎಂದು ತೆರಳಿದ ನಂದಳಿಕೆ ನಿವಾಸಿಯೊಬ್ಬರು ಅಲ್ಲಿಂದ ತರಕಾರಿ ಸಾಗಾಟದ ವಾಹನದ ಮೂಲಕ ಮತ್ತೆ ನಂದಳಿಕೆ ಬಂದಿರುವುದು ಕೂಡಲೇ ವಿಚಾರ ತಿಳಿದು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆತನನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿದೆ. ಹಾಗೂ ಬೆಂಗಳೂರಿನಿಂದ ಬಂದ ಒಂದು ಕುಟುಂಬದ ಮಕ್ಕಳು ಸೇರಿ ಐದು ಮಂದಿಯನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿದೆ.
ಹಾಸನದಿಂದ ಬಂದವರು ಹೋಮ್ ಕ್ವಾರೆಂಟೈನ್ಗೆ : ಜಿಲ್ಲೆಯಾದ್ಯಂತ ಎಲ್ಲೆಡೆ ಬಿಗಿ ಭದ್ರತೆಯಿದ್ದರೂ ಹಾಸನದಿಂದ ಬಂದ ಕುಟುಂಬದ ಐದು ಮಂದಿ ಸದಸ್ಯರನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿದೆ. ಹೀಗೆ ಒಟ್ಟು ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಉಡುಪಿ ಜಿಲ್ಲೆಯ ನಂದಳಿಕೆ ಗ್ರಾಮಕ್ಕೆ ಬಂದ ಸುಮಾರು 16 ಮಂದಿಯನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿದೆ.