ಕಾಸರಗೋಡು, ಏ 29 (DaijiworldNews/SM): ಜಿಲ್ಲೆಯಲ್ಲಿ ಒಂದು ಹಂತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಆದರೆ, ಈ ನಡುವೆ ಕೆಲವು ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಜನರ ನಿದ್ದೆಗೆಡಿಸಿದೆ. ಗುರುವಾರವೂ ಕೂಡ ಜಿಲ್ಲೆಯಲ್ಲಿ ಓರ್ವನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಆ ಮೂಲಕ ಇಲ್ಲಿಯ ತನಕ ಸೋಂಕಿಗೆ ಒಳಗಾದವರ ಸಂಖ್ಯೆ 179ಕ್ಕೇರಿಕೆಯಾಗಿದೆ. ಈ ನಡುವೆ ಇಬ್ಬರು ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಉತ್ತರ ವಲಯ ಐಜಿಪಿ ವಿಜಯ ಸಾಕರೆ ಹಾಗೂ ಅಶೋಕ್ ಯಾದವ್ ಕ್ವಾರಂಟೈನ್ ಗೆ ಒಳಗೊಂಡಿದ್ದಾರೆ. ಇಬ್ಬರು ಕಾಸರಗೋಡಿನ ಜವಾಬ್ದಾರಿ ವಹಿಸಿದ್ದರು.