ಮೂಡಬಿದಿರೆ, ಮೇ 1 (Daijiworld News/MSP): ಪುಚ್ಚೆಮೊಗರು ನಲ್ಲಿ ಶಿವಕುಮಾರ್ ಎಂಬ ಯುವಕನಿಗೆ ವ್ಯಕ್ತಿಯೋರ್ವ ಚೂರಿ ಇರಿದು ಕೊಲೆಗೆ ಯತ್ನಿಸಿದ್ದು ಆರೋಪಿಯನ್ನು ತ್ವರಿತ ಕಾರ್ಯಚರಣೆ ನಡೆಸಿ ಬಂಧಿಸಲಾಗಿದೆ.
ಬಂಧಿತನನ್ನು ಫರಂಗಿಪೇಟೆಯ ನಿವಾಸಿ ಹೈದರ್ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಸ್ಥಳೀಯರ ಸಹಕಾರದಿಂದ ಎ.ಜೆ ಆಸ್ಪತ್ರೆಗೆ ದಾಖಲಿಸಿ. ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಾಸಕರ ಸೂಚನೆಯಂತೆ ಎಸಿಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯ ಸೂಪರ್ ಕಾಪ್ ಸಬ್ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಅವರ ತಂಡ ಕಾರ್ಯಾಚರಣೆಗೆ ಇಳಿದಿದ್ದು, ಮಾಹಿತಿ ಕಲೆ ಹಾಕಿ 24 ಗಂಟೆಯ ಒಳಗೆ ಫರಂಗಿ ಪೇಟೆಯ ನಿವಾಸಿ ಹೈದರ್ ಎಂಬಾತನನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.