ಮಂಗಳೂರು, ಮೇ 1 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಆತಂಕಕಾರಿ ವಿಚಾರ ಎಂದರೆ ಕೊರೊನಾ ಹಾಟ್ ಸ್ಪಾಟ್ ಆಗಿರುವ ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟು ಇವರಿಬ್ಬರೂ ಹೊಂದಿರುವುದು ದೃಢವಾಗಿದೆ.
ಬಂಟ್ವಾಳ ದ 69 ವರ್ಷದ ವೃದ್ಧ ಮತ್ತು ಬೋಳೂರು ಗ್ರಾಮದ 62 ವರ್ಷದ ವೃದ್ಧನಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಬಂಟ್ವಾಳ ದ 69 ವರ್ಷದ ವೃದ್ಧನೂ ಏ.19 ರಂದು ಕೊರೊನಾಕ್ಕೆ ಬಲಿಯಾದ ಮಹಿಳೆಯ ಸಂಬಂಧಿ ಹಾಗೂ ನೆರೆಮನೆಯವರಾಗಿದ್ದಾರೆ. ರೋಗಿ ಸಂಖ್ಯೆ P-309 ದ್ವಿತೀಯ ಸಂಪರ್ಕದಿಂದ ವೃದ್ದನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
62 ವರ್ಷದ ವೃದ್ದ ಬೋಳಾರ ನಿವಾಸಿ ಗುರುವಾರವಷ್ಟೇ ಪಾಸಿಟಿವ್ ಆದ ವೃದ್ದೆ ಪತಿ ಎಂದು ತಿಳಿದುಬಂದಿದೆ. ಇವರಿಬ್ಬರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.