ಕಾಸರಗೋಡು, ಮೇ 01 (DaijiworldNews/SM): ಜಿಲ್ಲೆಯಲ್ಲಿ ಇಂದು ಹೊಸ ಕೊರೋನ ಸೋಂಕು ದೃಢಪಟ್ಟಿಲ್ಲ. ಆ ಮೂಲಕ ಶುಕ್ರವಾರದಂದು ಜಿಲ್ಲೆಯ ಜನತೆಗೆ ಒಂದಿಷ್ಟು ಸಿಹಿ ಸುದ್ದಿ ಲಭಿಸಿದಂತಾಗಿದೆ.
ಅಲ್ಲದೆ, ಇಡೀ ಕೇರಳ ರಾಜ್ಯದಲ್ಲೇ ತಿಂಗಳ ಬಳಿಕ ಒಂದೇ ಒಂದು ಸೋಂಕು ಪತ್ತೆಯಾಗದ ದಿನ ಇದಾಗಿದೆ. ಈ ನಡುವೆ ಕಾಸರಗೋಡಿನಲ್ಲಿ ನಾಲ್ವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನು ಕಾಸರಗೋಡಿನಲ್ಲಿ ಕೇವಲ 7 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 172 ಮಂದಿ ಈಗಾಗಲೇ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಸುಮಾರು 1918 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 26 ಮಂದಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.