ಮಂಗಳೂರು, ಮೇ 01 (DaijiworldNews/SM): ದ.ಕ. ಜಿಲ್ಲೆಯಲ್ಲಿ ಶುಕ್ರವಾರದಂದು ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಎಲ್ಲಾ ವರದಿಗಳು ನೆಗೆಟಿವ್ ಆಗಿವೆ.
ದ.ಕ. ಜಿಲ್ಲೆಯಲ್ಲಿ ಶುಕ್ರವಾರವಾರದಂದು 236 ಮಂದಿಯರ ವರದಿ ಲಭಿಸಿದ್ದು, ಈ ಪೈಕಿ 234 ನೆಗೆಟಿವ್ ಹಾಗೂ 2 ಪಾಸಿಟಿವ್ ವರದಿ ಲಭ್ಯವಾಗಿದೆ. ಇನ್ನು ಇಂದು 351 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 662 ಮಾದರಿಗಳ ವರದಿ ಇನ್ನು ಕೈ ಸೇರಬೇಕಿದೆ. ಇನ್ನು ಶುಕ್ರವಾರದಂದು 8 ಮಂದಿ ನಿಗಾಕ್ಕೆ ಒಳಗಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಅಧೀಕೃತ ಮಾಹಿತಿ ನೀಡಿದೆ.
135 ಮಂದಿಯನ್ನು ಸ್ಕ್ರೀನಿಂಗ್ಗೊಳಪಡಿಸಲಾಗಿದೆ. ಆ ಮೂಲಕ ಇಲ್ಲಿಯ ತನಕ ಜಿಲ್ಲೆಯಲ್ಲಿ ಒಟ್ಟು 39,909 ಸ್ಕ್ರೀನಿಂಗ್ಗೊಳಪಡಿಸಿದಂತಾಗಿದೆ. ಇನ್ನು ಎನ್ಐಟಿಕೆ ಸುರತ್ಕಲ್ನಲ್ಲಿ 59 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. 40 ಮಂದಿ ಇಎಸ್ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ ಬಳಿಕ ಒಟ್ಟು 6073 ಮಂದಿ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. ಈವರೆಗೆ ಒಟ್ಟು 3471 ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಇಂದಿನವರೆಗೆ ಒಟ್ಟು 2809 ಮಾದರಿಯ ವರದಿ ಲಭ್ಯವಾಗಿದೆ. ಈ ಪೈಕಿ 2875 ವರದಿ ನೆಗೆಟಿವ್ ಆಗಿದ್ದು, 24 ಮಂದಿಯ ವರದಿ ಪಾಸಿಟಿವ್ ದಾಖಲಾಗಿದೆ. 9 ಮಂದಿ ಪಾಸಿಟಿವ್ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಒಟ್ಟು 12 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಉಡುಪಿ ಜಿಲ್ಲೆಯ ಕೊರೊನಾ ಮಾಹಿತಿ:
ಉಡುಪಿ ಜಿಲ್ಲೆಯಲ್ಲಿ ಶುಕ್ರವಾರದಂದು 47 ಮಂದಿಯ ಪರೀಕ್ಷಾ ವರದಿ ಲಭಿಸಿದ್ದು, ಎಲ್ಲಾ ವರದಿಗಳು ನೆಗೆಟಿವ್ ಆಗಿದೆ. ಅಲ್ಲದೆ, ಶುಕ್ರವಾರ ಒಟ್ಟು 7 ಮಂದಿಯನ್ನು ನೋಂದಣಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2248 ಮಂದಿ 28 ದಿನಗಳ ನಿಗಾ ಪೂರೈಸಿದ್ದಾರೆ. ಇಂದು 36 ಮಂದಿ 28 ದಿನದ ನಿಗಾ ಪೂರೈಸಿದ್ದಾರೆ. 3032 ಮಂದಿ 14 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಇಂದು 71 ಮಂದಿ 14 ದಿನದ ನಿಗಾ ಸಂಪೂರ್ಣಗೊಳಿಸಿದ್ದಾರೆ. ಇಂದು ಯಾರೂ ಕೂಡಾ ಹೋಂಕ್ವಾರಂಟೈನ್ ಗೆ ದಾಖಲಾಗಿಲ್ಲ. ಸದ್ಯ 489 ಮಂದಿ ಹೋಂಕ್ವಾರಂಟೈನ್ನಲ್ಲಿದ್ದಾರೆ. ಒಟ್ಟು 27 ಮಂದಿ ಆಸ್ಪತ್ರೆಯಲ್ಲಿ ಕ್ವಾರಂಟೈನಲ್ಲಿದ್ದಾರೆ. ಇಂದು ಹಾಸ್ಪಿಟಲ್ ಕ್ವಾರಂಟೈನ್ನಲ್ಲಿದ್ದ 4 ಮಂದಿ ಬಿಡುಗಡೆಗೊಂಡಿದ್ದಾರೆ. ಮೂವರು ಐಸೊಲೇಷನ್ ವಾರ್ಡ್ಗೆ ದಾಖಲಾಗಿದ್ದಾರೆ. 6 ಮಂದಿ ಐಸೊಲೇಶನ್ ವಾರ್ಡ್ನಿಂದ ಬಿಡುಗಡೆಗೊಂಡಿದ್ದಾರೆ. ಶುಕ್ರವಾರದಂದು ಒಟ್ಟು 18 ಮಂದಿಯ ಮಾದರಿ ಸಂಗ್ರಹಿಸಲಾಗಿದೆ.