ಮಂಗಳೂರು, ಮೇ.02 (DaijiworldNews/PY) : ಹೊಸಾ ಕೊರೊನಾ ಪ್ರಕರಣಗಳು ಪತ್ತೆ ಆಗದಿರುವುದರಿಂದ ದ.ಕ ಜಿಲ್ಲೆಯ ತೊಕ್ಕೊಟ್ಟು ಪ್ರದೇಶವನ್ನು ಸೀಲ್ಡೌನ್ ಮುಕ್ತಗೊಳಿಸಲಾಗಿದೆ.
ಕೊರೊನಾ ಪ್ರಕರಣ ಪತ್ತೆಯಾಗಿದ್ದ ಕಾರಣ ತೊಕ್ಕೊಟ್ಟು ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿತ್ತು. ಇದೀಗ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದ ಕಾರಣದಿಂದಾಗಿ ಸೀಲ್ಡೌನ್ ತೆರವುಗೊಳಿಸಲಾಗಿದೆ.
ದ.ಕ ಜಿಲ್ಲೆಯಲ್ಲಿ ಪುತ್ತೂರು ತಾಲೂಕಿನ ಸಂಪ್ಯ, ಉಪ್ಪಿನಂಗಡಿ, ಬಂಟ್ವಾಳದ ಕಸಬಾ, ತುಂಬೆ, ನರಿಕೊಂಬು, ಮಂಗಳೂರು ತಾಲೂಕಿನ ಪಡೀಲ್ ಸಮೀಪದ ಫಸ್ಟ್ ನ್ಯುರೋ ಆಸ್ಪತ್ರೆ, ಕುಲಶೇಖರ ಸೇರಿ ಏಳು ಪ್ರದೇಶಗಳಲ್ಲಿ ಸೀಲ್ಡೌನ್ ಇದೆ.