ಕಾಸರಗೋಡು, ಮೇ.02 (DaijiworldNews/PY) : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 179 ರಿಂದ ಏಳಕ್ಕೆ ಕುಸಿದಿದ್ದು, ಕಾಸರಗೋಡು ಜಿಲ್ಲೆಯನ್ನು ಆರೆಂಜ್ ವಲಯವಾಗಿ ಘೋಷಿಸಲಾಗಿದೆ.
ಎರಡು ದಿನಗಳಿಂದ ಹೊಸ ಸೋಂಕು ಪ್ರಕರಣ ದೃಢಪಟ್ಟಿಲ್ಲ. ನಾಲ್ವರು ಗುಣಮುಖರಾಗಿದ್ದಾರೆ. 1734 ಮಂದಿ ನಿಗಾದಲ್ಲಿದ್ದು, ಈ ಪೈಕಿ 30 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.
ಕೇರಳದಲ್ಲಿ ಆದಿತ್ಯವಾರದಂದು ಲಾಕ್ ಡೌನ್ಗೆ ರಾಜ್ಯ ಸರಕಾರ ತೀರ್ಮಾನಿಸಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಕಚೇರಿಗಳು ಕಾರ್ಯಾಚರಿಸುವಂತಿಲ್ಲ ಹಾಗೂ ವಾಹನಗಳು ಸಂಚರಿಸುವಂತಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮೇ.10ರಿಂದ ಇದು ಜಾರಿಗೆ ಬರಲಿದೆ. ಜನರು ಮನೆಯಲ್ಲಿ ಉಳಿದುಕೊಂಡು ಈ ಪ್ರಕ್ರಿಯೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.