ಮಂಗಳೂರು, ಮೇ 03 (Daijiworld News/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಬೆಳಗ್ಗೆ 7 ರಿಂದ 7 ರ ತನಕ ರಿಲೀಫ್ ನೀಡಲಾಗಿದ್ದು ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೋಟ ಶ್ರೀನಿವಾಸ ಪೂಜಾರಿಯವರು ತಿಳಿಸಿದ್ದಾರೆ.
ಈ ಬಗ್ಗೆ ದಾಯ್ಜಿವರ್ಲ್ಡ್ಗೆ ಮಾಹಿತಿ ನೀಡಿದ ಅವರು ಹೆಚ್ಚು ಜನರು ಒಮ್ಮೆಲೇ ಸೇರುವ ಕಾರಣದಿಂದಾಗಿ ಮಾಲ್, ಸೆಲೂನ್, ಬಾರ್, ರೆಸ್ಟೂರೆಂಟ್, ಬ್ಯೂಟಿಪಾರ್ಲರ್, ದಂತ ಚಿಕಿತ್ಸಾಲಯಕ್ಕೆ ಅವಕಾಶ ನೀಡಲಾಗುವುದಿಲ್ಲ. ಉಳಿದಂತೆ ಎಲ್ಲಾ ಅಂಗಡಿ ಮುಗ್ಗಟ್ಟುಗಳು ತೆರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನಾಳೆಯಿಂದ ಎಲ್ಲಾ ವೈನ್ ಶಾಪ್ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ. ಆದರೆ ಅಲ್ಲಿ ಮಾರಾಟ ಮಾಡಲು ಮಾತ್ರ ಅವಕಾಶ ಅಲ್ಲಿ ಮದ್ಯಪಾನ ಮಾಡಲು ಅವಕಾಶವಿಲ್ಲ. ಬಾರ್ ಆಂಡ್ ರೆಸ್ಟೂರೆಂಟ್ಗಳಿಗೆ ತೆರೆಯಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಓಡಾಟಕ್ಕೆ ಪಾಸ್ನ ಅವಶ್ಯಕತೆಯಿಲ್ಲ. ಆದರೆ ಬೇರೆ ಜಿಲ್ಲೆಗಳಿಗೆ ಹೋಗಬೇಕಾದ್ದಲ್ಲಿ ಪಾಸ್ ಬೇಕು. ಬಸ್ಗಳ ಓಡಾಟಕ್ಕೆ ಅವಕಾಶ ನೀಡಿಲ್ಲ. ಆಟೋ ರಿಕ್ಷಾಗಳು, ಬೈಕ್ಗಳ ಸಂಚಾರಕ್ಕೆ ಅವಕಾಶವಿದೆ. ಆಟೋ ರಿಕ್ಷಾದಲ್ಲಿ 1+1 ಹಾಗೂ ಕಾರಿನಲ್ಲಿ 1+2 ಗೆ ಅವಕಾಶ ನೀಡಲಾಗಿದೆ.