ಮಂಗಳೂರು, ಮೇ 03 (DaijiworldNews/SM): ಸೋಮವಾರದಿಂದ ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕ ಓಡಾಟ ಸೇರಿದಂತೆ ಪ್ರಮುಖ ವಿಚಾರಗಳಿಗೆ ವಿನಾಯಿತಿ ನೀಡಲಾಗಿದ್ದು, ಅದರೊಂದಿಗೆ ಈ ದಿನ ಲಭ್ಯವಾದ ಕೊರೊನಾ ರಿಪೋರ್ಟ್ ನೆಗೆಟಿವ್ ಆಗುವ ಮೂಲಕ ಜನತೆ ನಿಟ್ಟುಸಿರು ಬಿಡುವಂತಾಗಿದೆ. ರವಿವಾರದಂದು ಒಟ್ಟು 114 ಮಂದಿಯ ಪರೀಕ್ಷಾ ವರದಿ ಕೈ ಸೇರಿದ್ದು, ಎಲ್ಲವೂ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ ಸೋಮವಾರದಿಂದ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರದೊಂದಿಗೆ ಜನರು ನಿರಾಳರಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಬಹುದಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸಂಬಂಧಿಸಿ ನೆಗೆಟಿವ್ ವರದಿ ಲಭ್ಯವಾಗುತ್ತಿದ್ದು, ಜನರಲ್ಲಿ ಒಂದಿಷ್ಟು ಆಶಾಭಾವನೆ ಮೂಡಿದಂತಾಗುತ್ತಿದೆ. ಮತ್ತೊಂದೆಡೆ ಮುಂದಿನ ದಿನಗಳಲ್ಲೂ ಬಹುತೇಕ ನೆಗೆಟಿವ್ ವರದಿಗಳೇ ಕೈ ಸೇರುವ ಸಾಧ್ಯತೆಗಳು ಅಧಿಕವಾಗಿವೆ. ಇನ್ನು ಇಂದು ಲಭ್ಯವಾದ ವರದಿಯಲ್ಲಿ 113 ಮಂದಿ ಪತ್ರಕರ್ತರ ವರದಿಯೂ ಸೇರಿದೆ.
ರವಿವಾರದಂದು ಲಭ್ಯವಾಗಿರುವ ವರದಿ:
ರವಿವಾರದಂದು ಲಭ್ಯವಾದ ಪರೀಕ್ಷಾ ವರದಿ 114
ಎಲ್ಲರ ವರದಿ ನೆಗೆಟಿವ್
95 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ರವಾನೆ
16 ಮಂದಿ ನಿಗಾ ಹಿನ್ನೆಲೆ ಆಸ್ಪತ್ರೆಗೆ ದಾಖಲು
ಫಿವರ್ ಕ್ಲೀನಿಕ್ ನಲ್ಲಿ ಪರೀಕ್ಷೆಗೆ ಒಳಪಟ್ಟವರು 2243 ಮಂದಿ
ಮೊಬೈಲ್ ಫಿವರ್ ಕ್ಲೀನಿಕ್ ನಲ್ಲಿ ಪರೀಕ್ಷಿಸಲ್ಪಟ್ಟವರು 395 ಮಂದಿ
ಎನ್ ಐಟಿಕೆಯಲ್ಲಿ ಕ್ವಾರಂಟೈನ್ ನಲ್ಲಿರುವವರು 68 ಮಂದಿ
ಇಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವವರು 40 ಮಂದಿ
ಸ್ಕ್ರೀನಿಂಗ್ ಗೆ ಒಳಗಾದವರು 70 ಮಂದಿ
6073 ಮಂದಿ 28 ದಿನಗಳ ಕ್ವಾರಂಟೈನ್ ಪೂರೈಸಿದವರು
ಜಿಲ್ಲೆಯ 113 ಮಂದಿ ಪತ್ರಕರ್ತರ ವರದಿ ನೆಗೆಟಿವ್