ಕಾಸರಗೋಡು, ಮೇ 03 (DaijiworldNews/SM): ಸತತ ಮೂರನೇ ದಿನವೂ ಕಾಸರಗೋಡಿನಲ್ಲಿ ಕೊರೊನಾ ಹೊಸ ಪ್ರಕರಣ ದೃಢಪಟ್ಟಿಲ್ಲ. ಕೇರಳದಲ್ಲೇ ಆದಿತ್ಯವಾರ ಪ್ರಕರಣ ದಾಖಲಾಗಿಲ್ಲ.ಜಿಲ್ಲೆಯಲ್ಲಿ ಓರ್ವ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ವರೆಗೆ ವಿನಾಯಿತಿ ನೀಡಲಾಗಿದೆ.
ಕಾಸರಗೋಡಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಆರಕ್ಕೆ ಇಳಿಕೆಯಾಗಿದೆ. 1604 ಮಂದಿ ನಿಗಾದಲ್ಲಿದ್ದು, 29 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.ಇದುವರೆಗೆ 4808 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದ್ದು, 3983 ಮಂದಿಯ ಫಲಿತಾಂಶ ಲಭಿಸಿದೆ. 449 ಮಂದಿಯ ಫಲಿತಾಂಶ ಲಭಿಸಬೇಕಿದೆ.
ಸೋಮವಾರದಿಂದ ಕಾಸರಗೋಡಿನಲ್ಲಿ ಏನು ವಿನಾಯಿತಿ:
ಕಾಸರಗೋಡು ಜಿಲ್ಲೆಯ ಜನರಿಗೂ ಕೊಂಚ ರಿಲೀಫ್
ನಾಳೆಯಿಂದ ಬೆಳಿಗ್ಗೆ 7ರಿಂದ ಸಂಜೆ 5ರ ತನಕ ಅಂಗಡಿಗಳು ಓಪನ್
ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶ ನೀಡಲಾಗಿದೆ
ಕಾಸರಗೋಡು ಆರೆಂಜ್ ವಲಯ ಹಿನ್ನೆಲೆ ಕೊಂಚ ಸಡಿಲಿಕೆ
ಫ್ಯಾಬ್ರಿಕೇಷನ್, ಮರದ ಮಿಲ್, ಪ್ಲೈ ವುಡ್ ಕಾರ್ಖಾನೆ ತೆರೆಯಲು ಅನುಮತಿ
ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಇತ್ಯಾದಿ ಕಡ್ಡಾಯ
ಟ್ಯಾಕ್ಸಿ ಸಂಚಾರಕ್ಕೆ ಅವಕಾಶ; ಚಾಲಕ ಹಾಗೂ ಓರ್ವ ಪ್ರಯಾಣಿಕನಿಗೆ ಮಾತ್ರ ಅವಕಾಶ
ಆಟೋರಿಕ್ಷಾ ಸಂಚಾರಕ್ಕೆ ಅನುಮತಿ ನೀಡಿಲ್ಲ
ವಾಹನದಲ್ಲಿ ತೆರಳುವ ಮುನ್ನ ಸ್ಯಾನಿಟೈಸರ್ ಬಳಸಿ ಕೈ ಶುಚಿಗೊಳಿಸಬೇಕು
ಅಗತ್ಯ ಸೇವೆಗಳಿಗಿರುವ ಸರ್ಕಾರಿ ಕಚೇರಿಗಳು ತೆರೆಯಲಿದೆ
ಕಂದಾಯ, ಪೊಲೀಸ್, ಕೃಷಿ, ಪಶುಸಂಗೋಪನೆ, ಜಿಲ್ಲಾ ಪಂಚಾಯತ್
ಅಗ್ನಿ ಶಾಮಕ, ಸ್ಥಳೀಯಾಡಳಿತ, ಆಹಾರ ಸುರಕ್ಷೆ, ಲೋಕೋಪಯೋಗಿ
ನೀರಾವರಿ, ಎಲ್.ಎಸ್.ಜಿ.ಡಿ., ಜಲ ಪ್ರಾಧಿಕಾರ, ಕೆ.ಎಸ್.ಇ.ಬಿ
ಕುಟುಂಬ ಶ್ರೀ, ಸಿವಿಲ್ ಸಪ್ಲೈಸ್ ಇಲಾಖೆಗಳು ಕಾರ್ಯಾಚರಿಸಬಹುದು
ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಆದೇಶ
ಕಾಸರಗೋಡು ಜಿಲ್ಲೆಯ ಕೋವಿಡ್ 19 ಹಾಟ್ ಸ್ಪಾಟ್ ಗಳು ಕಾಸರಗೋಡು ನಗರಸಭೆ, ಚೆಂಗಳ, ಚೆಮ್ನಾಡ್, ಮೊಗ್ರಾಲ್ ಪುತ್ತೂರು, ಅಜಾನೂರು, ಉದುಮ ಗ್ರಾಮಪಂಚಾಯತ್ ಗಳು ಹಾಟ್ ಸ್ಪಾಟ್ ಗಳಾಗಿವೆ. ನಾಳೆಯಿಂದ (ಮೇ 4ರಿಂದ) ಘೋಷಿಸಲಾದ ವಿನಾಯಿತಿ ಈ ಪ್ರದೇಶಕ್ಕೆ ಅನ್ವಯವಾಗದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.