ಉಡುಪಿ, ಮೇ 03 (DaijiworldNews/SM): ಸೋಮವಾರದಿಂದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಲಾಕ್ ಡೌನ್ ನಿಯಮಗಳಲ್ಲಿ ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಈ ನಿಯಮಗಳು ಅನ್ವಯವಾಗಲಿದ್ದು, ಒಂದಿಷ್ಟು ಸಡಿಲಿಕೆ ಮಾಡಲಾಗಿದೆ.
ಸೋಮವಾರದಿಂದ ಉಡುಪಿಯಲ್ಲಿ ಏನಿರುತ್ತೆ? ಏನಿರಲ್ಲ?
ನಾಳೆಯಿಂದ ಉಡುಪಿಯಲ್ಲಿ ಯಾಂತ್ರಿಕ ಮೀನುಗಾರಿಕೆಗೆ ಅವಕಾಶ
ಒಂದು ದಿನಕ್ಕೆ ಕೇವಲ 30 ದೋಣಿಗಳು ತೆರಳಬಹುದು
ಬಂದರಿನಲ್ಲಿ ಹರಾಜು ಹಾಕುವಂತಿಲ್ಲ, ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ
ಗ್ರೀನ್ ಝೋನ್ ಬಂದಿದೆಯೆಂದು ಮೈ ಮರೆಯುವಂತಿಲ್ಲ
ಜಿಲ್ಲೆಯಲ್ಲಿ ಅಂಗಡಿಗಳು ಬೆಳಗ್ಗೆ 7 ರಿಂದ 1 ರ ವರೆಗೆ ತೆರೆದಿರುತ್ತದೆ
ಫ್ಯಾಕ್ಟರಿಗಳು ಸ್ವಂತ ಬಸ್ ಬಳಸಬೇಕು
ಕಾರ್ಮಿಕರು ಮನೆಗೆ ವಾಪಾಸ್ ಬರಲು ಸಂಜೆ 5 ರಿಂದ 7 ರವರೆಗೆ ಅವಕಾಶ
ಸೆಲೂನ್, ಬ್ಯೂಟಿ ಪಾರ್ಲರ್ ಒಂದು ವಾರದ ನಂತರ ಒಪನ್
ಗ್ರೀನ್ ಝೋನ್ ಆಗುವಲ್ಲಿ ಶ್ರಮಿಸಿದ ಎಲ್ಲರಿಗೂ ಜಿಲ್ಲಾಧಿಕಾರಿಗಳಿಂದ ಅಭಿನಂದನೆ
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿಕೆ
ಅಗತ್ಯವಿದ್ದಲ್ಲಿ ಕೆಎಸ್ಅರ್ ಟಿಸಿ ಬಸ್ ಸಂಚಾರಕ್ಕೆ ಚಿಂತನೆ?
ಉಡುಪಿ ಜಿಲ್ಲೆ ಗ್ರೀನ್ ಝೋನ್ ಹಿನ್ನೆಲೆ
ಬಸ್ ಓಡಾಟಕ್ಕೆ ಅವಕಾಶ ನೀಡಲು ಸರ್ಕಾರ ಆದೇಶ
ಈ ಹಿನ್ನೆಲೆ ಕೆಎಸ್ಆರ್ ಟಿಸಿ ಅಧಿಕಾರಿಗಳು ಜೊತೆ ಮಾತುಕತೆ
ಯಾವ ಪ್ರದೇಶದಲ್ಲಿ ಬಸ್ಸುಗಳ ಸಂಚಾರ ಅಗತ್ಯವಿದೆ
ಅಂತಹ ಪ್ರದೇಶಗಳ ಸರ್ವೇ ನಡೆಸಲು ಸೂಚಿಸಿದ್ದೇನೆ
ಅಗತ್ಯವಿದ್ದಲ್ಲಿ ಕೆಎಸ್ ಅರ್ ಟಿಸಿ ಬಸ್ ಸಂಚಾರಕ್ಕೆ ಚಿಂತನೆ
ನಾಳೆಯಿಂದ ರೂಟ್ ಸರ್ವೇ ಆರಂಭಿಸಲಿರುವ ಅಧಿಕಾರಿಗಳು
ಸರ್ವೇ ಬಳಿಕ ಬಸ್ಸುಗಳು ಸಂಚಾರಕ್ಕೆ ಅವಕಾಶ ನೀಡಲಾಗುದು
ಅಗತ್ಯವಾದ ಪ್ರದೇಶಗಳಲ್ಲಿ ಬಸ್ಸು ಓಡಾಟಕ್ಕೆ ಅವಕಾಶ
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿಕೆ
ಅಂತರ್ ರಾಜ್ಯದಿಂದ ಉಡುಪಿಗೆ ಬರಲು ಅವಕಾಶ
ಅಂತರ್ ರಾಜ್ಯದಿಂದ ಉಡುಪಿಗೆ ಬರಲು ಅವಕಾಶ ಇದೆ
ಈ ಸಂಬಂಧ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
ಕಾಮನ್ ಸೆಂಟರ್ ನಲ್ಲಿ ಆರೋಗ್ಯ ತಪಾಸಣೆ
ರೆಡ್ ಜೊನ್ ರಾಜ್ಯಗಳಿಂದ ಬರುವವರಿಗೆ ಸರ್ಕಾರಿ ಕ್ವಾರಂಟೈನ್
ಅಂತರ್ ಜಿಲ್ಲಾ ಓಡಾಟಕ್ಕೆ ಜಿಲ್ಲಾದಿಕಾರಿಗಳಿಂದ ಪಾಸ್ ವಿತರಣೆ
ಅಗತ್ಯ ಕಾರಣಗಳಿಗಾಗಿ ಮಾತ್ರ ಅಂತರ್ ಜಿಲ್ಲಾ ಪ್ರಯಾಣ
ಅಂತರ್ ಜಿಲ್ಲಾ ಪ್ರಯಾಣಕ್ಕೆ ತಹಶೀಲ್ದಾರರ ಕಚೇರಿಯಲ್ಲಿ ಅಪ್ಲಿಕೇಶನ್ ಹಾಕಬಹುದು
ಕ್ವಾರಂಟೈನ್ ಗಾಗಿ ಹಾಸ್ಟೆಲ್, ಹೊಟೇಲ್ ವ್ಯವಸ್ಥೆ ಮಾಡಲಾಗುತ್ತದೆ
ಕೊರೊನಾ ಲಕ್ಷಣಗಳು ಇರುವವರು ಉಡುಪಿ ಜಿಲ್ಲೆಗೆ ಬರಬಾರದು
ಹೊರ ರಾಜ್ಯದಿಂದ ಬರುವವರಿಗೆ ಕಡ್ಡಾಯ ಕ್ವಾರಂಟೈನ್
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿಕೆ