ಮಂಗಳೂರು, ಮೇ 04 (Daijiworld News/MSP): ಬೆಂಗಳೂರಿನ ಆದ್ಯಾ ಕಂಮ್ಯುನಿಕೇಷನ್ಸ್ ನ ನೇತೃತ್ವದಲ್ಲಿ ಜಾಹಿರಾತು ಮಾರುಕಟ್ಟೆ ಮಾಧ್ಯಮ ಸಂವಹನ ಈ ಕುರಿತ ವೆಬೈನರ್ (ಆನ್ಲೈನ್ ಸಂವಾದ) ಕಾರ್ಯಕ್ರಮ ಇದೇ ಮೇ 11 ಸೋಮವಾರ 11 ಗಂಟೆಯಿಂದ 12:30 ರವರೆಗೆ ನಡೆಯಲಿದೆ.
ಕೊರೋನಾ ಲೊಕ್ಡೌನ್ ಹಾಗೂ ಮುಂದಿನ ದಿನಗಳಲ್ಲಿ ಜನಾಕರ್ಷಣೆ ಹಾಗು ರಿಟೇಲ್ ಉದ್ಯಮದ ಕುರಿತು ಐದು ಜನ ಅನುಭವಿಗಳು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುನಿಲ್ ವಲುಂಜ್ಕರ್, ಬಿ.ಪಿ. ಲ್ , ಟಿ. ವಿ. ಸ್ , ಬಜಾಜ್, ಕಿರ್ಲೋಸ್ಕರ್ ಕಂಪೆನಿಗಳಲ್ಲಿ ದುಡಿದವರು. ಸಮೀರ್, ಆಸ್ಟರ್ ಮಿಮ್ಸ್ ಕ್ಯಾಲಿಕಟ್ ನ್ ವ್ಯವಸ್ಥಾಪಕ ನಿರ್ವಹಣಾಧಿಕಾರಿಯಾಗಿ ದುಡಿದವರು. ಆರೋಗ್ಯ ಕ್ಷೇತ್ರದ ಕಾರ್ಯತಂತ್ರದ ನಿಪುಣರು.
ಅಲೆಕ್ಸಿಯಾ, ದೈಜಿವರ್ಲ್ಡ್ ಮಾಧ್ಯಮದ ಆಡಳಿತ ನಿರ್ದೇಶಕರು, ಗಲ್ಫ್ ರಾಷ್ಟ್ರಗಳಲ್ಲಿ ದುಡಿದು ಉನ್ನತ ಸ್ಥಾನಕ್ಕೇರಿದವರು. ಕೇಶವ ಪ್ರಸಾದ್ ಮುಳಿಯ, ಪ್ರತಿಷ್ಠಿತ ಮುಳಿಯ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗು ಸಂಸ್ಥೆಯನ್ನು ಉನ್ನತಕ್ಕೆಬೆಳೆಸಿದವರು. ವೇಣು ಶರ್ಮ- ಮೈ ಅಂತರಾತ್ಮ ಸಂಸ್ಥೆಯೊಂದಿಗೆ ಮ್ಯಾನೇಜ್ಮೆಂಟ್ ಹಾಗು ಬಿಸಿನೆಸ್ ಕನ್ಸಲ್ಟಿಂಗ್ ನಲ್ಲಿ 20 ವರುಷದ ಅನುಭವ ಹೊಂದಿದ್ದು ಕನ್ಸೂಮರ್ ಬೆಹವೀಯರ್ ಬಗ್ಗೆ ಓದಿ ತಿಳಿದವರು.
ಆದ್ಯಾ ಕಂಮ್ಯುನಿಕೇಷನ್ಸ್ ನ ಚೆಂಗಪ್ಪ ಇವರ ನೇತೃತ್ವದಲ್ಲಿ ನಡೆಯುವ ಈ ಉಚಿತ ವೆಬೈನರ್ ಉಪಯೋಗವನ್ನು ವಿವಿಧ ಕ್ಷೇತ್ರದ ಜನ ಪಡೆಯಬಹುದು . ರಿಜಿಸ್ಟರ್ ಮಾಡಲು http://webinar.aadyaacommunications.com/ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ
For Registration : http://webinar.aadyaacommunications.com/
Or mail us @ info@aadyaacommunications.com / 7760119030