ಮಂಗಳೂರು, ಮೇ 04 (Daijiworld News/MSP): ಕೊರೊನಾ ಸೋಂಕು ಫಸ್ಟ್ ನ್ಯೂರೋ ಅಥವಾ ಬಂಟ್ವಾಳದಿಂದ ಆರಂಭವಾಯಿತೇ? ಹಾಗಿದ್ರೆ ಬಂಟ್ವಾಳ ಕಸಬಾ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ? ಎಂಬ ಸೋಂಕಿನ ಮೂಲ ಪತ್ತೆಗಾಗಿ 6 ಮಂದಿಯ ವಿಶೇಷ ತಂಡ ರಚಿಸಲಾಗಿದ್ದು, ಮೇ 6ರೊಳಗೆ ಈ ತಂಡ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಈ ವರದಿಯಿಂದ ಸೋಂಕಿನ ಮೂಲ ಪತ್ತೆಯಾಗುವ ಸಾಧ್ಯತೆಯಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಕೊರೊನಾ ಸೋಂಕಿನ ಮೂಲದ ಪತ್ತೆಯ ಬಗ್ಗೆ ಒಂದು ಹಂತದ ತನಿಖೆ ಮುಗಿದಿದೆ. 12 ನೇ ದಿನ ಸ್ಯಾಂಪಲ್ ತೆಗೆದ ಬಳಿಕ ತನಿಖೆಯ ಸ್ಪಷ್ಟ ಚಿತ್ರಣ ಸಿಗಲಿದೆ . ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಂಬಂಧಿಸಿದಂತೆ 19 ಮಂದಿ ರೋಗಿಗಳು, 21 ಸಹಾಯಕರು ಸೇರಿದಂತೆ ಒಟ್ಟು 210 ಮಂದಿ ನಾನಾಕಡೆ ಕ್ವಾರಂಟೈನ್ನಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಉಡುಪಿಯ ನಾಲ್ಕರು, ಚಿಕ್ಕಮಗಳೂರಿನ ಐವರು, ಕೊಡಗಿನ ಮೂವರನ್ನು ಪತ್ತೆಹಚ್ಚಿ ತಪಾಸಣೆ ನಡೆಸಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.