ಕಾಸರಗೋಡು, ಮೇ 04 (Daijiworld News/MSP): ಹೊರರಾಜ್ಯಗಳಿಂದ ಆಗಮಿಸುವ ಕೇರಳೀಯರಿಗಾಗಿ ಗಡಿಯಾದ ತಲಪಾಡಿಯಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಮೂಲಕ ಆಗಮಿಸುವವವರನ್ನು ಆರೋಗ್ಯ ತಪಾಸಣೆ ಸೇರಿದಂತೆ ಅಗತ್ಯ ಸೌಲಭ್ಯಗಳಿಗಾಗಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ.
ಬೇರೆ ಬೇರೆ ರಾಜ್ಯಗಳಿಂದ ತಲಪಾಡಿಗೆ ಬಂದು ತಲಪುವ ಮಂದಿಯ ಮಾಹಿತಿ, ಆರೋಗ್ಯ ಸ್ಥಿತಿ ಇತ್ಯಾದಿ ತಪಾಸಣೆ ನಡೆಸುವ ನಿಟ್ಟಿನಲ್ಲಿ ವಿಸ್ತೃತ ಸೌಲಭ್ಯ ಕಲ್ಪಿಸಲಾಗಿದೆ . ಇಂದು ಬೆಳಿಗ್ಗೆಯಿಂದ ತಲಪಾಡಿ ಚೆಕ್ ಪೋಸ್ಟ್ ನಲ್ಲಿ 100 ಹೆಲ್ಪ್ ಡೆಸ್ಕ್ ಗಳು ಕಾರ್ಯಾರಂಭ ಗೊಂಡಿದ್ದು , ನೋರ್ಕಾ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿದ ಕಾಸರಗೋಡು ಸೇರಿದಂತೆ ಕೇರಳದ ಹಲವಾರು ಮಂದಿ ತಲಪುವ ನಿರೀಕ್ಷೆ ಇದ್ದು , ಇದಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ . ಜಿಲ್ಲಾಧಿಕಾರಿ ಡಾ. ಡಿ . ಸಜಿತ್ ಬಾಬು ಮೇಲುಸ್ತುವಾರಿಯಲ್ಲಿ ಹೆಲ್ಪ್ ಡೆಸ್ಕ್ ಕಾರ್ಯಾಚರಿಸುತ್ತಿದೆ.