ಮಂಗಳೂರು, ಮೇ 04 (Daijiworld News/MB) : ಆಭರಣ ಮಳಿಗೆಗಳನ್ನು ತರೆಯಲು ಅವಕಾಶ ಇಲ್ಲ ಎಂಬ ಅಧಿಸೂಚನೆ ಇದ್ದರೂ ಕೂಡಾ ಮಳಿಗೆ ತೆರೆಯುವ ಮೂಲಕ ಕಲ್ಯಾಣ್ ಜ್ಯುವೆಲ್ಲರ್ಸ್ ದ.ಕ ಜಿಲ್ಲಾಡಳಿತದ ಆದೇಶ ಗಾಳಿಗೆ ತೂರಿದೆ.
ಬೆಳ್ಳಂಬೆಳ್ಳಗೆ ಕಲ್ಯಾಣ್ ಜ್ಯುವೆಲ್ಲರ್ಸ್ನ್ನು ತೆರೆಯಲಾಗಿದ್ದು ಶಾಸಕರು ಹಾಗೂ ಪೊಲೀಸರು ಸೂಚನೆ ನೀಡಿದ ಬಳಿಕ ಮುಚ್ಚಲಾಗಿದ್ದರೂ ಆಭರಣ ಮಳಿಗೆಯ ಒಳಗಡೆ ವ್ಯವಹಾರ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಆಭರಣ ಮಳಿಗೆಯ ಒಳಗಡೆ ಸಿಬ್ಬಂದಿಗಳು ಇದ್ದಾರೆ ಎಂಬ ಮಾಹಿತಿ ದೊರೆತಿದ್ದು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇನ್ನು ಶ್ರೀಮಂತರಿಗೆ ಒಂದು ಕಾನೂನು ಹಾಗೂ ಬಡವರಿಗೆ ಒಂದು ಕಾನೂನಾ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ.