ಮಂಗಳೂರು, ಮೇ 04 (Daijiworld News/MSP): ವಿದ್ಯುತ್ ಪೂರೈಕೆ ಕಾಮಗಾರಿ ನಡೆಯಲಿರುವ ಹಿನ್ನಲೆಯಲ್ಲಿ ನಾಳೆ ನಗರದ ಹಲವು ಪ್ರದೇಶದಲ್ಲಿ ನೀರು ಸರಬರಾಜು ವ್ಯತ್ಯಯ ಉಂಟಾಗಲಿದೆ ಮಹಾನಗರ ಪಾಲಿಕೆ ತಿಳಿಸಿದೆ.
ಮಂಗಳೂರು ಮಹಾನರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಹೆಚ್.ಎಲ್.ಪಿ.ಎಸ್.-2 ಮತ್ತು ಎಲ್.ಎಲ್.ಪಿ.ಎಸ್.-2 ಸ್ಥಾವರಗಳಿಗೆ ವಿದ್ಯುತ್ ಪೂರೈಕೆ ಮಾಡುವ 33 ಕೆ.ವಿ ತಂತಿಗಳನ್ನು ಮೆಸ್ಕಾಂ ವತಿಯಿಂದ ಸ್ಥಳಾಂತರಿಸುವ ಕೆಲಸವನ್ನು ಮೇ 5 ರಂದು ಹಮ್ಮಿಕೊಂಡಿರುವುದರಿಂದ ಹೆಚ್.ಎಲ್.ಪಿ.ಎಸ್.-2 ಮತ್ತು ಎಲ್.ಎಲ್.ಪಿ.ಎಸ್.-2 ಸ್ಥಾವರಗಳಿಗೆ ವಿದ್ಯುತ್ ಪೂರೈಕೆ ನಿಲುಗಡೆಗೊಳ್ಳುವುದರಿಂದ ನೀರು ಸರಬರಾಜನ್ನು ಮೇ 5 ರಂದು ಬೆಳಿಗ್ಗೆ 8 ಗಂಟೆಯಿಂದ ಮೇ 6 ರಂದು ಬೆಳಿಗ್ಗೆ 8 ಗಂಟೆವರೆಗೆ 24 ಗಂಟೆ ಅವಧಿಯಲ್ಲಿ ಪಡೀಲ್ ಸ್ಥಾವರದಿಂದ ನೀರು ಪಡೆಯುವ ಪ್ರದೇಶಗಳಾದ ಬಜಾಲ್, ಪಡೀಲ್, ಶಕ್ತಿನಗರ, ಮಂಗಳಾದೇವಿ, ಪಾಂಡೇಶ್ವರ, ಕರಾವಳಿ ಸ್ಥಾವರ ಪ್ರದೇಶಗಳು ಕಣ್ಣೂರು, ಶಕ್ತಿನಗರ, ಬೋಂದೆಲ್ ಹಾಗೂ ಮರಕಡ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು ಎಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ