ಮಂಗಳೂರು, ಮೇ 04 (Daijiworld News/MSP): ದ.ಕ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದರೂ, ಉಡುಪಿ ಜಿಲ್ಲೆಯಂತೆ ಎಚ್ಚರಿಕೆ ನಡೆ ಅನುಸರಿಸದೆ, ಲಾಕ್ ಡೌನ್ ಸಡಿಲಿಕೆ ಮಾಡಿರುವುದು ವಿಪರ್ಯಾಸವೇ ಸರಿ ಎಂದು ಯುವ ಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರೂ ಕೂಡ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಶಾಸಕರು ಲಾಕ್ ಡೌನ್ ಸಡಿಲಿಕೆ ಮಾಡಿರುವುದು ಅವರ ನಿರ್ಲಕ್ಷತನ ವನ್ನು ತೋರಿಸುತ್ತದೆ.
ಪ್ರಸ್ತುತ ಜಿಲ್ಲೆ ಕಿತ್ತಾಳೆ ಝೋನ್ ನಲ್ಲಿದ್ದು 9 ಮಂದಿ ಕೋರೋಣ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು ಮಂಗಳೂರು ನಗರ ಹಾಗೂ ಜಿಲ್ಲೆಯ ಎರಡು ಪ್ರದೇಶಗಳಾದ ಬೋಳೂರು ಮತ್ತು ಶಕ್ತಿ ನಗರವನ್ನು ಸೀಲ್ ಡೌನ್ ಮಾಡಿದರೂ ಕೂಡ, ಜಿಲ್ಲಾಡಳಿತದ ಮೇ. 4 ರಿಂದ ಜಿಲ್ಲೆಯಾದ್ಯಂತ ಲಾಕ್ ಡೌನ್ ಸಡಿಲಿಸಿದ್ದು ಬೆಳಗ್ಗೆ 7 ರಿಂದ ಸಾಯಂಕಾಲ 7 ರವರೆಗೆ ವಾಹನ ಓಡಾಟ ಹಾಗೂ ಇತರ ವ್ಯಾಪಾರ ವಹಿವಾಟುಗಳಿಗೆ ಅನುಮತಿ ನೀಡಿದ್ದು ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ
ಅಲ್ಲದೆ ಪಕ್ಕದ ಉಡುಪಿ ಜಿಲ್ಲೆ ಹಸಿರು ವಲಯದಲ್ಲಿ ಇದ್ದರೂ ಮಧ್ಯಾಹ್ನ1:00 ಗಂಟೆಯವರೆಗೆ ಮಾತ್ರ ಲಾಕ್ ಡೌನ್ ಸಡಿಲಿಕೆ ಕೊಟ್ಟಿರುತ್ತಾರೆ. ಪಾಸಿಟಿವ್ ಕೇಸ್ ಗಳುಳು ಸಂಪೂರ್ಣ ಮುಕ್ತವಾದ ಜಿಲ್ಲೆ ಕೂಡ ತನ್ನ ಎಚ್ಚರಿಕೆಯನ್ನು ವಹಿಸುತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಜನರನ್ನು ಸಂಪೂರ್ಣವಾಗಿ ಅಪಾಯಕ್ಕೆ ತಳ್ಳುತ್ತಿದೆ.
ಇಂತಹ ನಿರ್ಲಕ್ಷದ ನಡೆಯಿಂದ ನಮ್ಮ ಜಿಲ್ಲೆಯನ್ನು ಮಗದೊಮ್ಮೆ ಕೆಂಪು ವಲಯಕ್ಕೆ ಹೋಗವ ದಿನಗಳು ದೂರವಿಲ್ಲ ಕೋರೋಣ ನಿಯಂತ್ರಣಕ್ಕಾಗಿ ವಿಧಿಸಿರುವುದನ್ನು ಬಿಜೆಪಿಯ ಶಾಸಕರು ಸಚಿವರು ಮರೆತಿರುವುದು ವಿಪರ್ಯಾಸವೇ ಸರಿ ಎಂದಿದ್ದಾರೆ.