ಮಂಗಳೂರು, ಮೇ 04 (DaijiworldNews/SM): ದ.ಕ. ಜಿಲ್ಲೆಯಲ್ಲಿ ಸೋಮವಾರದಂದು ೭೫ ಮಂದಿಯ ವರದಿಗಳು ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಆ ಮೂಲಕ ಜಿಲ್ಲೆಯ ಜನತೆ ಸೋಮವಾರದಂದು ನಿರಾಳರಾಗಿದ್ದಾರೆ. ಸೋಮವಾರದಿಂದ ಒಂದೆಡೆ ಸಾರ್ವಜನಿ ಸಂಚಾರಕ್ಕೆ ಸಂಜೆ ತನಕ ಅವಕಾಶ ಕಲ್ಪಿಸಲಾಗಿದೆ. ಈ ಖುಷಿಯಲ್ಲಿರುವ ಜನರಿಗೆ ಕೊರೊನಾ ನೆಗೆಟಿವ್ ವರದಿ ನಿರಾಳರನ್ನಾಗಿಸಿದೆ.
ಸೋಮವಾರದಂದು ಒಟ್ಟು 49ಮಂದಿ ತಪಾಸಣೆಗೊಳಪಟ್ಟಿದ್ದಾರೆ. ಸದ್ಯ ಜಿಲ್ಲೆಯ 9 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು 28 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 75 ಮಂದಿಯ ವರದಿಗಳು ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಜಿಲ್ಲೆಯ 330 ಮಂದಿಯ ವರದಿಗಳು ಇನ್ನು ಕೈಸೇರಬೇಕಾಗಿದೆ. ಇನ್ನು 11 ಮಂದಿ ನಿಗಾ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಇಲ್ಲಿಯ ತನಕ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಈವರೆಗೆ ಒಟ್ಟು 40,206 ಮಂದಿ ಸ್ಕ್ರ್ರೀನಿಂಗ್ಗೊಳಪಟ್ಟಿದ್ದಾರೆ. 33 ಮಂದಿ ಎನ್ಐಟಿಕೆ ಸುರತ್ಕಲ್ನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಇಎಸ್ಐ ಹಾಸ್ಪಿಟಲ್ನಲ್ಲಿ 40 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಇನ್ನು ಇಲ್ಲಿಯ ತನಕ 6073 ಮಂದಿ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ ಎಂಬುವುದಾಗಿ ದ.ಕ. ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.