ಉಡುಪಿ, ಮೇ 04 (DaijiworldNews/SM): ಗ್ರೀನ್ ಝೋನ್ ಉಡುಪಿ ಜಿಲ್ಲೆಯಲ್ಲಿ ಸೋಮವಾರದಂದು ಮಧ್ಯಾಹ್ನ ತನಕ ನೀಡಲಾಗಿದ್ದ ಲಾಕ್ ಡೌನ್ ಸಡಿಲಿಕೆಯನ್ನು ಮಂಗಳವಾರದಿಂದ ಸಂಜೆ ತನಕ ವಿಸ್ತರಿಸಲಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಬಹುತೇಕ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ.
ಸೋಮವಾರದ ಪರಿಸ್ಥಿತಿಯನ್ನು ಅವಲೋಕಿಸಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಸೋಮವಾರದಂದು ಕೆಲವು ಆದೇಶಗಳನ್ನು ಪರಿಷ್ಕರಿಸಿದ್ದಾರೆ. ಆ ಮೂಲಕ ಜಿಲ್ಲೆಯ ಜನತೆಗೆ ಮಂಗಳವಾರದಿಂದ ಮತ್ತಷ್ಟು ಸೇವೆಗಳು ಲಭ್ಯವಾಗಲಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಕಡ್ಡಾಯವಾಗಿ ಜನಸಾಮಾನ್ಯರು ಧರಿಸಬೇಕಾಗಿದೆ.
ಉಡುಪಿ ಜಿಲ್ಲಾಡಳಿತದಿಂದ ನಿಯಮ ಸಡಿಲಿಕೆ:
ಮಾಂಗಳವಾರದಿಂದ ಬೆಳಗ್ಗೆ 7ರಿಂದ ಸಂಜೆ 7ರ ತನಕ ಲಾಕ್ ಡೌನ್ ಸಡಿಲಿಕೆ
ಜಿಲ್ಲೆಯಲ್ಲಿ ಎಸಿ, ಸೆಂಟ್ರಲ್ ಎಸಿ, ಸಿಂಗಲ್ ಬ್ರ್ಯಾಂಡ್
ಮಲ್ಟಿ ಬ್ರಾಂಡ್ ಶೋರೂಂಗಳಿಗೆ ತೆರೆಯಲು ಅವಕಾಶ
ಚಿನ್ನಾಭರಣ ಮಳಿಗೆ, ಬಟ್ಟೆ ಅಂಗಡಿ,
ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್ ಅಂಗಡಿಗಳು ಕಾರ್ಯಾಚರಣೆ
ಮಳಿಗೆಗಳಲ್ಲಿ ಏಕಕಾಲದಲ್ಲಿ ಇಪ್ಪತ್ತೈದು ಜನ ಗ್ರಾಹಕರಿಗೆ ಮಾತ್ರ ಅವಕಾಶ
ದೊಡ್ಡ ಶೋರೂಂಗಳಲ್ಲಿ ಇಪ್ಪತ್ತೈದು ಜನ ಸಿಬ್ಬಂದಿಗಳಿಗೆ ಮಾತ್ರ ಇರಬೇಕು
ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಹತ್ತು ಜನ ಸಿಬ್ಬಂದಿಗಳನ್ನು ಬಳಸಬಹುದು
ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಏಕಕಾಲದಲ್ಲಿ ಹತ್ತು ಜನ ಗ್ರಾಹಕರು ಮಾತ್ರ ತೆರಳಬಹುದು
ಯಾವುದೇ ಮಳಿಗೆಗಳಲ್ಲಿ ಕಡ್ಡಾಯ ಎಸಿ ಬಳಸುವುದು ನಿಷೇಧ
ಪ್ರತಿ ಮಳಿಗೆಗಳನ್ನು ಸ್ಯಾನಿಟೇಷನ್ ಮಾಡುವುದು ಕಡ್ಡಾಯ
ಸಿಬ್ಬಂದಿಗಳ ಕಡ್ಡಾಯ ಆರೋಗ್ಯ ತಪಾಸಣೆ ನಡೆಸಲೇಬೇಕು
ಕಟ್ಟುನಿಟ್ಟಿನ ಆದೇಶ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್