ಮಂಗಳೂರು, ಮೇ 04 (DaijiworldNews/SM): ಕೊರೊನಾ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಆಗಿದ್ದು, ಈ ಹಿನ್ನೆಲೆಯಲ್ಲಿ ರಂಜಾನ್ ಆಚರಣೆ ಸರಳವಾಗಿ ಆಚರಿಸಲು ದ.ಕ. ಜಿಲ್ಲಾ ಖಾಝಿ ಕರೆ ನೀಡಿದ್ದಾರೆ.
ದೇಶದೆಲ್ಲೆಡೆ ಕೊರೊನಾ ಸಾಂಕ್ರಮಿಕ ರೋಗ ತಾಂಡವವಾಡುತ್ತಿದೆ. ಈ ಹಿನ್ನೆಲೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವಂತೆ ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಆದೇಶ ಮಾಡಿದ್ದಾರೆ.
ರಂಜಾನ್ ತಿಂಗಳು ಎಲ್ಲರೂ ಮನೆಯಲ್ಲೆ ಇದ್ದು ನಮಾಜ್ ನಿರ್ವಹಿಸಲು ಕರೆ ನೀಡಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ರಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ ಕೂಡ ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ವೇಳೆ ಬಟ್ಟೆ ಅಂಗಡಿಗಳು ತೆರೆಯಲು ಅನುಮತಿ ನೀಡದಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ರಂಜಾನ್ ಹಬ್ಬವೆಂದರೆ ಮುಸ್ಲಿಮರ ಪ್ರಮುಖ ಹಬ್ಬಗಳಳ್ಳೊಂದಾಗಿದೆ. ಈ ಹಬ್ಬವನ್ನು ವಿಜೃಂಭನೆಯಿಂದ ಮುಸ್ಲಿಮರು ಆಚರಿಸುತ್ತಾರೆ. ಹೊಸ ಬಟ್ಟೆ ಸೇರಿದಂತೆ ಇಫ್ತಾರ್ ಕೂಟ ನಡೆಸಲಾಗುತ್ತದೆ. ದಾನ ಧರ್ಮವೂ ಕೂಡ ಪ್ರಮುಖವಾಗಿದೆ. ಆದರೆ, ಈ ಬಾರಿ ಇವುಗಳಿಗೆಲ್ಲ ಕೊರೊನಾ ಕರಿಛಾಯೆ ಬೀರಿದೆ. ಈ ಹಿನ್ನೆಲೆಯಲ್ಲಿ ಹೊಸ ಬಟ್ಟೆಗಳನ್ನು ಖರೀದಿಸದಂತೆ ಹಾಗೂ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಮನವಿ ಮಾಡಲಾಗಿದೆ.