ಉಡುಪಿ, ಮೇ 05 (Daijiworld News/MB) : ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಡಿಯೋ ವೈರಲ್ ಆದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ಮಸ್ಕತ್ನಲ್ಲಿ ಕೇರಳದ ಹಿಂದೂ ಚಾಲಕನೊಬ್ಬನಿಗೆ ಜಿಹಾದಿಗಳು ಕಪಾಲಮೋಕ್ಷ ಮಾಡಿದ್ದು ಅದರ ವಿರುದ್ಧ ಸಿಡಿದೇಳುವ ಕೆಲಸ ಮಾಡಿದ್ದೇನೆ. ಇದರಿಂದಾಗಿ ನಿರಂತರವಾಗಿ ದುರುದ್ದೇಶದಿಂದಲ್ಲೇ ಅನವಶ್ಯಕವಾಗಿ ಕರೆ ಮಾಡುತ್ತಲ್ಲೇ ಇದ್ದಾರೆ. ಈ ಸಂದರ್ಭದಲ್ಲಿ ನಾನು ಓರ್ವನಲ್ಲಿ ನನಗೆ ಗೊತ್ತಿಲ್ಲಪ್ಪ ಎಂದು ಹೇಳಿದ್ದೇನೆ. ಯಾರೂ ಕೂಡಾ ಇದರ ಹಿಂದೆ ಮುಂದೆಯ ವಿಚಾರವನ್ನು ಸರಿಯಾಗಿ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನನಗೆ ನಿರಂತರವಾಗಿ ನೂರಾರು ಬೆದರಿಕೆ ಕರೆಗಳು ಬರುತ್ತಲ್ಲೇ ಇರುತ್ತದೆ. ಸೋಮವಾರ ಈ ವಾಯ್ಸ್ ರೆಕಾರ್ಡ್ ವೈರಲ್ ಆದ ಬಳಿಕ ಜಿಹಾದಿಗಳಿಂದ ನೂರಾರು ಕರೆಗಳು ಬಂದಿದ್ದು ಅವರು ನಿನಗೆ ನನ್ನ ವಿರುದ್ಧ ಮಾತನಾಡಲು ಬರುತ್ತದೆ, ಈ ಬಗ್ಗೆ ಮಾಹಿತಿಯೇ ಇಲ್ಲವಾ ಎಂದು ಅವ್ಯಾಚವಾಗಿ ಬೈದು ಬೆದರಿಕೆ ಹಾಕಿದ್ದಾರೆ. ಅಶ್ಲೀಲವಾದ ಕರೆಗಳು ಕೂಡಾ ಬಂದಿದೆ ಎಂದು ತಿಳಿಸಿದ್ದಾರೆ.
ನಿರಂತರವಾಗಿ ನನ್ನ ಕ್ಷೇತ್ರದ ಹಾಗೂ ಜನರ ಕೆಲಸರಲ್ಲಿ ನಿರತವಾಗಿದ್ದೇನೆ. ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವವರಿಗೆ ದಿನಸಿ ನೀಡುವ ಕಾರ್ಯ ಮಾಡುತ್ತಿದ್ದೇನೆ. ವಿಶ್ರಾಂತಿಯೇ ಪಡೆದಿಲ್ಲ. ನಾನು ವಿಶ್ರಾಂತಿಯಿಲ್ಲದೆಯೇ ಕೆಲಸ ಮಾಡಿದ್ದರೂ ಕೂಡಾ ಅನವಶ್ಯಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಬಗ್ಗೆ ಬೇಸರವಿಲ್ಲ. ಯಾರೂ ಈ ವಾಯ್ಸ್ ರೆಕಾರ್ಡ್ ಪಾವರ್ಡ್ ಮಾಡಿದ್ದೀರಿ ಅವರು ಇದರ ಹಿಂದೆ ಮುಂದೆ ಏನು ವಿಚಾರ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಾಮಾಣಿಕವಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಯಾರಿಗೂ ಅಗೌರವ ತರುವ ಕೆಲಸ ನಾನು ಮಾಡಿಲ್ಲ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರು ಅದು ಇಂಟರ್ನೆಟ್ ಕಾಲ್ ಅದನ್ನು ಟ್ರೇಸ್ ಮಾಡಲು ಸಾಧ್ಯವಿಲ್ಲ ಎಂದು ಸಾಬೂಬು ನೀಡುತ್ತಾರೆ ಎಂದು ಹೇಳಿದ್ದಾರೆ.
ಸೋಮವಾರ ಜಿಲ್ಲೆಯ ನಾಗರಿಕರೊಬ್ಬರು ಸಂಸದೆ ಶೋಭಾ ಕರಂದ್ಲಾಜೆ ಜೊತೆಯಲ್ಲಿ ಲಾಕ್ಡೌನ್ ಕುರಿತಾಗಿ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಆಡಿಯೋದಲ್ಲಿ ಉಡುಪಿ ವ್ಯಕ್ತಿ ಲಾಕ್ಡೌನ್ ಸಡಿಲಿಕೆ ವಿಷಯದಲ್ಲಿ ಮಾಹಿತಿ ಕೇಳಿದಾಗ ಲಾಕ್ಡೌನ್ ಸಡಿಲಿ ಮಾಡಿರುವುದು ನನಗೆ ತಿಳಿದಿಲ್ಲ ಎಂಬಂತೆ ಅವರು ಮತಾನಾಡಿದ್ದರು.