ಮಂಗಳೂರು, ಮೇ 5 (Daijiworld News/MSP): ನಗರದ ಹೃದಯಭಾಗದ ಮಣ್ಣ ಗುಡ್ಡೆಯಲ್ಲಿ ಪ್ರತ್ಯಕ್ಷವಾಗಿ, ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಕಾಡುಕೋಣವನ್ನು ಸ್ಥಳೀಯರ , ಪೊಲೀಸರ ಸಹಕಾರದೊಂದಿಗೆ ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ.
ಮೇ 5ರ ಬೆಳ್ಳಂಬೆಳಗ್ಗೆ ಮಣ್ಣಗುಡ್ಡೆಯ ವೇರ್ ಹೌಸ್ ಬಳಿ ರಾಜರೋಷವಾಗಿ ಸುತ್ತಾಡುತ್ತಿರುವ ಕಾಡುಕೋಣ ಕಂಡು ಸ್ಥಳೀಯರು ಭಯಭೀತರಾಗಿದ್ದರು. ಮಾಹಿತಿ ಪಡೆದ ಅರಣ್ಯ ಇಲಾಖೆಯ ಸ್ಥಳಕ್ಕೆ ಆಗಮಿಸಿ ಕಾಡುಕೋಣ ಸೆರೆಗೆ ಕಾಯಾಚರಣೆ ಆರಂಭಿಸಿತ್ತು.
ನಗರದೊಳಗೆ ಕಾಡುಕೋಣ ಸೆರೆ ಹಿಡಿಯುವುದು ಸವಾಲಿನ ಕೆಲಸವೊಂದು ಅರಿತಿದ್ದ ಅರಣ್ಯ ಇಲಾಖೆ ಅರವಳಿಕೆ ತಜ್ಞರ ತಂಡದ ಮಾಹಿತಿ ನೀಡಿದ್ದರು. ಅರವಳಿಕೆ ಚುಚ್ಚುಮದ್ದಿನಿಂದ ಪ್ರಜ್ಞಾ ಹೀನವಾದ ಕಾಡುಕೋಣವನ್ನು ಸೆರೆಹಿಡಿದು ಚಾರ್ಮಾಡಿಯ ಪಶ್ಚಿಮ ಘಟ್ಟದ ಕಾಡಿಗೆ ಬಿಡಲಾಯಿತು.