ಸುರತ್ಕಲ್, ಮೇ 05 (DaijiworldNews/PY) : ಸುರತ್ಕಲ್ ಸಮೀಪದ ಎಂಆರ್ಪಿಎಲ್ ಪರಿಸರದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿಗಳು ಸೆರೆಹಿಡಿದಿದ್ದಾರೆ.
ಕುತ್ತೆತ್ತೂರು ಬಾಜಾವಿಯಲ್ಲಿ ಸ್ಥಳೀಯರು ಹಂದಿಗೆ ಇಟ್ಟಿದ್ದ ಉರುಳಿನಲ್ಲಿ ಚಿರತೆ ಸಿಲುಕಿಕೊಂಡಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಚಿರತೆಯನ್ನು ಸಾಗಿಸಿದ್ದಾರೆ.
ಮೇ 1ರಂದು ರಾತ್ರಿ ಎಂಆರ್ಪಿಎಲ್ ಪರಿಸರದಲ್ಲಿ ಚಿರತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಮರುದಿನ ಬೆಳಗ್ಗೆ ಸಿಸಿ ಟಿವಿಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭ ತಿಳಿದುಬಂದಿದೆ. ತಕ್ಷಣವೇ ಅರಣ್ಯ ಇಲಾಖೆಗೆ ಎಂಆರ್ಪಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಮಂಗಳೂರಿನ ಇಲಾಖೆಯ ಸಿಬ್ಬಂದಿ ಚಿರತೆ ಕಂಡುಬಂದ ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆಯ ಚಲನವಲನಗಳ ಕುರುಹನ್ನು ಪರಿಶೀಲಿಸಿದ್ದಾರೆ. ಅದರೊಂಂದಿಗೆ ಚಿರತೆ ಹೋಗಿರಬಹುದಾದ ಸ್ಥಳಗಳಿಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದರು.