ಮಂಗಳೂರು, ಮೇ 05 (DaijiworldNews/PY) : ಮಂಗಳೂರಿನ ಗೋಲ್ಡ್ ಫಿಂಚ್ ಖಾಸಗಿ ಮೈದಾನಕ್ಕೆ ಆಗಮಿಸಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ಆದರೆ ಮೈದಾನದ ವಾಚ್ಮೆನ್ ಕಾರ್ಮಿಕರಿಗೆ ಮೈದಾನಕ್ಕೆ ಪ್ರವೇಶ ನೀಡಲು ನಿರಾಕರಿಸಿದ ಕಾರಣ ವಲಸೆ ಕಾರ್ಮಿಕರಿಗೆ ಗೊಂದಲವುಂಟಾಗಿದ್ದು, ಹೈ ಡ್ರಾಮಾ ನಡೆದಿದೆ.
ಮೈದಾನಕ್ಕೆ ಪ್ರವೇಶ ನೀಡಲು ನಿರಾಕರಿಸಿದ್ದ ಕಾರಣ ಕಾರ್ಮಿಕರು ರಸ್ತೆಯಲ್ಲೇ ನಿಂತು ಗಲಾಟೆ ಮಾಡಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಶಾಸಕ ಯು. ಟಿ ಖಾದರ್ , ಎಂಎಲ್ ಸಿ ಐವಾನ್ ಡಿಸೋಜಾ, ಮಾಜಿ ಶಾಸಕ ಮೋಯ್ದಿನ್ ಭಾವ, ಮಿಥುನ್ ರೈ ಸ್ಥಳಕ್ಕೆ ಆಗಮಿಸಿದ್ದಾರೆ.
ಈ ವಿಚಾರವಾಗಿ ಅಧಿಕಾರಿ ಹಾಗೂ ಯು.ಟಿ ಖಾದರ್ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಸರಿಯಾಗಿ ಮಾಹಿತಿ ನೀಡದ ತಹಶೀಲ್ದಾರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದು, ಸ್ಥಳದಲ್ಲೇ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಈ ಸಂದರ್ಭ ಕೆ.ಎಸ್.ಆರ್.ಟಿ.ಸಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿಯೇ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿದ್ದಾರೆ. ಸುಮಾರು 1000 ಕ್ಕೂ ಹೆಚ್ಚು ಕಾರ್ಮಿಕರನ್ನು ಅಧಿಕಾರಿಗಳು ಬಸ್ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರಿಂದ ಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಯಿತು.