ಮಂಗಳೂರು, ಮೇ 05 (DaijiworldNews/PY) : ನಗರದ ಹೃದಯಭಾಗದ ಮಣ್ಣ ಗುಡ್ಡೆಯಲ್ಲಿ ಪ್ರತ್ಯಕ್ಷವಾಗಿ, ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಕಾಡುಕೋಣವನ್ನು ಸ್ಥಳೀಯರ, ಪೊಲೀಸರ ಸಹಕಾರದೊಂದಿಗೆ ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದ್ದು ಚಾರ್ಮಾಡಿಯ ಪಶ್ಚಿಮ ಘಟ್ಟದ ಕಾಡಿಗೆ ಬಿಡಲಾಗಿತ್ತಾದರೂ ಕಾಡುಕೋಣ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ನಗರದೊಳಗೆ ಕಾಡುಕೋಣ ಸೆರೆ ಹಿಡಿಯುವುದು ಸವಾಲಿನ ಕೆಲಸವೊಂದು ಅರಿತಿದ್ದ ಅರಣ್ಯ ಇಲಾಖೆ ಅರವಳಿಕೆ ತಜ್ಞರ ತಂಡದ ಮಾಹಿತಿ ನೀಡಿದ್ದರು. ಅರವಳಿಕೆ ಚುಚ್ಚುಮದ್ದಿನಿಂದ ಪ್ರಜ್ಞಾ ಹೀನವಾದ ಕಾಡುಕೋಣವನ್ನು ಸೆರೆಹಿಡಿದು ಚಾರ್ಮಾಡಿಯ ಪಶ್ಚಿಮ ಘಟ್ಟದ ಕಾಡಿಗೆ ಬಿಡಲಾಗಿತ್ತು.
ಆದರೆ, ಕಾಡು ಕೋಣವನ್ನು ರಕ್ಷಿಸುವ ಭರದಲ್ಲಿ ಅರವಳಿಕೆ ಚಚ್ಚುಮದ್ದು ನೀಡಿದ್ದ ಡೋಸ್ನ ಪ್ರಮಾಣವು ಜಾಸ್ತಿಯಾಗಿ ಕಾಡುಕೋಣ ಪ್ರಾಣ ಕಳೆದುಕೊಂಡಿದೆ ಎಂದು ತಿಳಿದುಬಂದಿದೆ.