ಮಂಗಳೂರು, ಮೇ 6 (Daijiworld News/MSP): ಬೆಂಗಳೂರಿನಲ್ಲಿ ಬಾಕಿಯಾಗಿದ್ದ ಕರಾವಳಿ ಮೂಲದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚಿನ ಮಂದಿ ವಲಸೆ ಕಾರ್ಮಿಕರು, ಮೂರು ದಿನಗಳಿಂದ ರಾಜ್ಯ ಸರಕಾರ ನೇತೃತ್ವದ ಬಸ್ ಮೂಲಕ ತಮ್ಮ ಊರುಗಳಿಗೆ ಮರಳಿದ್ದಾರೆ.
ಕರಾವಳಿಗೆ ಬಂದಿರುವ ಎಲ್ಲಾ ಕಾರ್ಮಿಕರನ್ನು ಮುಂದಿನ 14 ದಿನಗಳವರೆಗೆ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕಾರವಾರ , ಮಡಿಕೇರಿ, ಪ್ರದೇಶಕ್ಕೆ ಮೇ 3 ರಿಂದ 5 ರವರೆಗೆ ಒಟ್ಟು 70 ಬಸ್ ಗಳಲ್ಲಿ ಆಗಮಿಸಿದ್ದಾರೆ. ಮಂಗಳೂರು ಡಿಪೋಗೆ 25 ಬಸ್ , ಉಡುಪಿ-೯ ಕುಂದಾಪುರ-24 ಮತ್ತು ಮಡಿಕೇರಿಗೆ 12 ಬಸ್ ಗಳು ಬಂದಿವೆ.
ಎಲ್ಲಾ ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದ್ದು, ಕಾರ್ಮಿಕರು ಬಸ್ ಗೆ ಆಗಮಿಸಿವ ವೇಳೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇನ್ನು ಬಸ್ ಕರಾವಳಿ ಗಡಿ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಮತ್ತೊಮ್ಮೆ ತಪಾಸಣೆ ನಡೆಯುತ್ತಿದೆ. ಪ್ರತಿಯೊಬ್ಬರ ಪೋಟೋ ಹೆಸರು ಪೂರ್ತಿ ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಪ್ರಮುಖ ಮಾಹಿತಿ ಕಲೆ ಹಾಕಲಾಗುತ್ತಿದೆ ಬಳಿಕ ಕೈಗೆ ಸೀಲ್ ಆಳವಡಿಸಿ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಲಾಗುತ್ತದೆ.