ಮಂಗಳೂರು, ಮೇ 6 (Daijiworld News/MSP):ದ.ಕ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 28 ಪ್ರಕರಣ ಪತ್ತೆಯಾದಂತಾಗಿದೆ.
ಫಸ್ಟ್ ನ್ಯೂರೋ ಆಸ್ಪತ್ರೆ ಯ ಸಂಪರ್ಕ ಹೊಂದಿದ್ದ P-536 ಮಹಿಳೆಯಿಂದ ಇಬ್ಬರಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಬೋಳೂರು ನಿವಾಸಿಗಳಾದ 38 ವರ್ಷದ ಮಹಿಳೆ ಹಾಗೂ 11 ವರ್ಷದ ಬಾಲಕಿಗೆ ಸೋಂಕು ಇರುವುದು ದೃಢಪಟ್ಟಿದೆ.
ಬಂಟ್ವಾಳದ ಪಿ - 360 ರ ಸಂಪರ್ಕದಲ್ಲಿದ್ದ ಮೃತ ಮಹಿಳೆಯ 16 ವರ್ಷದ ಮಗಳಿಗೂ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಬಾಲಕಿಯನ್ನು ಎನ್, ಐ ಟಿ ಕೆ ಯಲ್ಲಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಇವರ 12ನೇ ದಿನದ ಗಂಟಲು ದ್ರವದ ವರದಿ ಬಂದಿದ್ದು ಅದರಲ್ಲಿ ಸೊಂಕು ಇರುವುದು ಖಚಿತವಾಗಿದೆ.
ಜಿಲ್ಲೆಯಲ್ಲಿ ಸದ್ಯ 13 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ.